Sunday 16 December 2012

ಪ್ರಳಯದ ಭೀತಿ! ಒಂದು ಚಿಂತನೆ

ಚಿತ್ರ ಕೃಪೆ: ಅಂತರ್ಜಾಲ 

ಪ್ರತಿಯೊಬ್ಬರೂ ತಿಳಿಯಬೇಕಾದ ಅಂಶವೆಂದರೆ ಪ್ರಕೃತಿ ಯಾವುದೇ ಆಘಾತವನ್ನು ಹೇಳಿ, ಸೂಚನೆ ನೀಡಿ ಜನರಿಗೆ ತಿಳಿಸುವಂತಹ ಪ್ರವೃತಿಯಿರುವುದಿಲ್ಲ. ಯಾವುದೇ ಸುಳಿವಿಲ್ಲದೆಯೇ ಅಗೋಚರವಾಗಿ ಇದ್ದಕ್ಕಿದ್ದಂತೆ ಆಗುವುದೇ ಪ್ರಳಯ. ಕ್ಯಾತರಿನ, ಸುನಾಮಿಯಂತಹ ಪ್ರಚಂಡ ಅಲೆಗಳು ಭೂಮಿಯ ಮೇಲೆ ಅಪ್ಪಲಿಸಿದಾಗಲೂ ಮುನ್ನೆಚ್ಚರಿಕೆಯ ಭೀತಿ ಆವರಿಸಿತ್ತು. ತಡೆಯಲು ಸಾಧ್ಯವಾಗಲೇ ಇಲ್ಲ ಎನ್ನುವುದನ್ನು ಮರೆಯಬಾರದು.

೧೯೬೧-೬೨ರ ಸಮಯದಲ್ಲಿ ಉಂಟಾದ ಅಷ್ಟ ಗ್ರಹ ಕೂಟವು ಇಡಿ ಬ್ರಹ್ಮಾಂಡವನ್ನೇ ಅಲ್ಲಾಡಿಸುವಂತಾಗಬೇಕಿತ್ತು, ಹಾಗಾಗಲೇ ಇಲ್ಲ. ಯಾವುದೇ ಪ್ರಳಯ ಜಲ, ವಾಯು, ಅಗ್ನಿ, ಪ್ರಳಯ ಆಗುತ್ತಲೂ ಇರಲಿಲ್ಲ. ಆಗ ಮಾಧ್ಯಮಗಳು ಕೂಡ ಜನ ಹುಚ್ಹೆಬಿಸುವ ಭೀತಿಯನ್ನುಂಟು ಮಾಡುವ ಪ್ರಚಾರ ಮಾಡುತ್ತಿರಲಿಲ್ಲ.

ಜನರಿಗೆ ಧರ್ಮ ಜಾಗೃತಿ, ಜ್ಞಾನ ಜಾಗೃತಿ, ಆಹಾರ ಜಾಗೃತಿ, ಸಮಯ ಶಿಸ್ತಿನ ಜಾಗೃತಿ, ಶಿಕ್ಷಣ ಜಾಗೃತಿ, ಬದುಕುವ ಜಾಗೃತಿ ಹೇಳಿಕೊಡುವ ಗುಣಮಟ್ಟದ ಮಾಧ್ಯಮಗಳು ತಲೆ ಎತ್ತಬೇಕು. ಕೊಲೆ, ಅಪರಾಧ, ಕೆಟ್ಟ ನೃತ್ಯ, ಮನೆಗಳನ್ನು ಮನಗಳನ್ನು, ಸಂಸಾರಗಳನ್ನು ಹಾಳು ಮಾಡುವ ಧಾರಾವಾಹಿಗಳು, ರಾಜಕೀಯ ದೊಂಬರಾಟದ ಪ್ರಚಾರ, ಹಾಗೂ ಜನ ಜೀವನದಲ್ಲಿ ಉಂಟಾಗುತ್ತಿರುವ ಗೊಂದಲವೇ ಪ್ರಳಯ ಸದೃಶ, ನಾಗರೀಕತೆ, ಸಂಸ್ಕಾರ, ಧರ್ಮ, ನೀತಿ ಮುಂತಾದವುಗಳಿಂದ ಕೂಡಿರಬೇಕಾದ ಅಂಶವೇ ನಾಶವಾಗುತ್ತಿರುವುದೇ "ಪ್ರಳಯ".
   
ಶಿಕ್ಷಣ ಬಿಟ್ಟ ವಿದ್ಯಾರ್ಥಿ, ವಿಧ್ಯಾರ್ಥಿನಿಯರು, ಅಲ್ಲದೆ ಮನೆಯಲ್ಲಿಯೇ ಕುಳಿತುಕೊಂಡು ದೂರದರ್ಶನ ನೋಡಿಕೊಂಡು ತಾವೂ ಹಾಳಾಗಿ ಕುಟುಂಬವನ್ನೇ ಒಂದಲ್ಲಾ ಒಂದು ರೀತಿಯಲ್ಲಿ ಬಲಿ ತೆಗೆದುಕೊಳ್ಳುತ್ತಿರುವುದೇ "ಪ್ರಳಯ"

ಪ್ರಕೃತಿ ವಿಕೋಪಕ್ಕೆ ಎಲ್ಲಾ ಬಲಿಯಾಗುತ್ತಾರೆ ಯಾರೂ ಹೊರತಲ್ಲ. ನಾಗರಿಕತೆಯಲ್ಲಿ ಆಗುತ್ತಿರುವ ದುಷ್ಟ ಸಂಸ್ಕೃತಿ, ದುರಾಚಾರ, ದುರಾಡಳಿತ, ಇದರ ಬಗ್ಗೆ ಜಾಗೃತಿ ಮೂಡಿಸಿ ಜನರನ್ನು ಸನ್ಮಾರ್ಗದಲ್ಲಿ ತಿರುಗಿಸಬೇಕಾದುದು ಮಾಧ್ಯಮದ ಕಾರ್ಯವಾಗಬೇಕು, ವಿಧ್ವಾಂಸರ ಕಾರ್ಯವಾಗಬೇಕು, ಜ್ಯೋತಿಷಿಗಳ ಕಾರ್ಯವಾಗಬೇಕು,. ಹೀಗಾಗುತ್ತಿಲ್ಲ ಇದೆ ಪ್ರಳಯ.
ಪ್ರಳಯವೆಂದರೆ ನಾಶ. ಪ್ರಳಯವಾಗುತ್ತಿದೆಯೆಂದು ಓಡಿ ಎಲ್ಲಿಗೆ ಹೋಗುತ್ತೀರಿ? ಏನು ಮಾಡುತ್ತೀರಿ? ಇದೊಂದು ಕೃತಕ ಭೀತಿಯನ್ನುಂಟು ಮಾಡುವ ಸೋಗು ಪ್ರಳಯವಾಗುತ್ತದೆಯೆಂದಾಗ ಎಲ್ಲ ರೀತಿಯ ದುರಾಚಾರ ಹೆಚ್ಚುವುದು.  ಜನರು ಸಾಲ ಸೋಲ ಮಾಡಿ ಕೆಟ್ಟದ್ದನ್ನು ಮಾಡಿ ಹೇಗೋ ಪ್ರಳಯವಾಗುತ್ತದೆಯೆಂಬ ಗುಂಗಿನಿಂದ ಇದ್ದು ವಂಚಿತರಾಗುತ್ತಾರೆ. ಪ್ರಳಯವಾಗದಿದ್ದರೆ? ಏನೂ ಆಗದಿದ್ದರೆ ಆಗ ಆ ವ್ಯಕ್ತಿಯ ಜೀವನದಲ್ಲಿ ಖಂಡಿತವಾಗಿಯೂ  ಪ್ರಳಯ ಸದೃಶ ಸ್ಥಿತಿಯುಂಟಾಗುತ್ತದೆ.

ದೇಶದಲ್ಲಿ ನುಸುಳುತ್ತಿರುವ ಆತಂಕವಾದಿಗಳನ್ನು ಕಂಡು ಹಿಡಿಯುವುದಕ್ಕಾಗುತ್ತಿಲ್ಲ.  ಸಿ.ಸಿ. ಟಿವಿ, ಕ್ಯಾಮೆರ  ಮುಂತಾದ ಸೌಕರ್ಯವಿದ್ದರೂ ಅಪಘಾತಗಳ ಸುಳಿವು ಗೊತ್ತಾಗುತ್ತಿಲ್ಲ. ದೇಶ ಲೂಟಿ ಮಾಡಿ "ಕಪ್ಪು ಹಣ"ದ ರಕ್ಷಣೆ ಮಾಡುತ್ತಾ ದೇಶವನ್ನು ಕಣಗಳಾಗಿ ಮಾಡುತ್ತಿರುವ ರಾಜ್ಯವಾಳುತ್ತಿರುವವರ ಪ್ರಚಾರ ಮಾಡುತ್ತಿಲ್ಲ. ಇದು ಪ್ರಳಯ!. ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಸಂಗತಿ ಆಗಿದೆ. ಇದೆ ಪ್ರಳಯ!

ಕೃಷಿ ಕರಗುತ್ತಿದೆ, ವಿದ್ಯಾ, ಶಿಕ್ಷಣ ಕ್ಷೇತ್ರ ಕರಗುತ್ತಿದೆ, ಗುಣ ಮಟ್ಟದ ಶಿಕ್ಷಕ, ವಿಧ್ಯಾರ್ಥಿ,ಗಳಿಲ್ಲದೆ ವಿಧ್ಯಾಕ್ಷೇತ್ರ ಕರಗುತ್ತಿದೆ.  ಇದು ಪ್ರಳಯ! ಇದು ಪ್ರಳಯ ಜನರಿಗೆ ನೀತಿ ಹೇಳುವಂತಾಗಬೇಕು, ಭೀತಿಯುಂಟು ಮಾಡುವಂತಾಗಬಾರದು.

ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಬರುವ ಜನರು ಮಾಧ್ಯಮವನ್ನು ಸಮರ್ಪಕವಾಗಿ ಉಪಯೋಗ ಮಾಡಿಕೊಳ್ಳದೆ ಜನರ ಹಾವಳಿಯು ದಿನೇ ದಿನೇ ಹೆಚ್ಚುತ್ತಿದೆ. ಇದು ಪ್ರಳಯ!  ಆಸ್ಪತ್ರೆಗೆ ಎದೆ ನೋವು ಅಂತ ಹೋದರೆ ಕನಿಷ್ಠ ಚಿಕಿತ್ಸೆ ಎಂದರೆ ರುಪಾಯಿ ಒಂದು ಲಕ್ಷದ್ದು! ತಲೆನೋವು ಎಂದು ಹೋದರೆ ರೂ.ಐವತ್ತು ಸಾವಿರ.  ಮೂಳೆ ಮುರಿತ ಎಂದು ಹೋದರೆ ಕನಿಷ್ಠ ಶಸ್ತ್ರ ಚಿಕಿತ್ಸೆ ಮಡಿ ಉಕ್ಕಿನ/ಕಬ್ಬಿಣದ ರಾಡ್ ವ್ಯಕ್ತಿಯನ್ನು ಅಬಲನನ್ನಾಗಿ ಮಾಡುವುದೇ ಪ್ರಳಯ!

ಜಾಗೃತಿ ಮೂಡಿಸಿಕೊಳ್ಳಿ! ಪ್ರಕೃತಿಯು ಅಷ್ಟೊಂದು ಸುಲಭವಾಗಿ ರಹಸ್ಯ ಬಿಟ್ಟುಕೊಡುವುದಿಲ್ಲ  ಈವರೆಗೂ ಬಿಟ್ಟು ಕೊಟ್ಟಿಲ್ಲ. ಯಾವುದೇ ಕಾರಣಕ್ಕೂ, ಎಂತಹ  ಬುದ್ಧಿವಂತನೂ, ವಿಜ್ಞಾನಿಯೂ, ಜ್ಯೋತಿಷಿಯೂ ಕೂಡ ಪ್ರಕೃತಿ ರಹಸ್ಯವನ್ನು ಭೆದಿಸಲಾರ. ಪ್ರಾಣಿ ಪಕ್ಷಿಗಳಿಗೆ ಸಾಧ್ಯವಾಗಬಹುದು. ಜಗತ್ತಿನಲ್ಲಿ ಭೂಭಾರ ಕಡಿಮೆ ಆಗುವುದಕ್ಕೆ ಮಾತ್ರ ಹಲವು ಪ್ರಕೃತಿ ಸಹಜವಾಗಿ ಪ್ರವಾಹ, ಬಿರುಗಾಳಿ, ಅಗ್ನಿ ಪರ್ವತ, ಅತಿವೃಷ್ಟಿ/ಅನಾವೃಷ್ಟಿ  ಮುಂತಾದುವು ಜರಗುಬಹುದು. ಇಂತಹ ಸಂದರ್ಭಗಳು ಕೆಲವೊಮ್ಮೆ ಬಂದು ಜನಸಂಖ್ಯೆ ಕಡಿಮೆ ಆಗಲು ಸಾಧ್ಯವಾಗಬಹುದು. ದುಷ್ಟ ಆಡಳಿತ, ಕೆಟ್ಟ ಆಹಾರದ ಪೂರೈಕೆ, ಪರಿಸರ ಮಾಲಿನ್ಯ ಮುಂತಾದವು ನಿತ್ಯವೂ ಜನರನ್ನು, ಜನಜೀವನವನ್ನು ನಾಗರೀಕತೆಯನ್ನು ಆರೋಗ್ಯವನ್ನು ಕೆಡಿಸುತ್ತದೆ. ಇದು ಪ್ರಳಯ ಸದೃಶ!  

ಮಾನವ ಕೃತ ವಿಶ್ವ ವ್ಯಾಪಾರ ಕೇಂದ್ರ (WTC) ಅಂತಹ ನಾಶ ಸುಳಿವು ದೊರೆಯಲಿಲ್ಲ. ತಾಜ್ ಹೋಟೆಲ್ ಮೇಲೆ ಆಕ್ರಮಣ, ಮುಂಬೈ ಮೇಲೆ ದಾಳಿ, ಸಂಸತ್ ಭವನದ ಮೇಲೆ ಧಾಳಿ, ಇತಿಹಾಸ ಪುಟಗಳಲಿ ದೇಶದ್ರೋಹಿಗಳ ಪಾತ್ರ ಪ್ರಳಯ ಸದೃಶ. ಇಂದಿನ ದಿನಗಳಲ್ಲಿ ಮೋಸ ವಂಚನೆ, ದುರಾಡಳಿತ, ಲಂಚ, ಕೊಲೆ, ಸುಲಿಗೆ, ನೀರು, ಆಹಾರದ ಭೀತಿ ಪ್ರಳಯ ಸದೃಶ. ಹೇಳುತ್ತಾ ಹೋದರೆ ಒಂದು ಸಹಸ್ರ ಪುಟಗಳೇ ಆಗುತ್ತದೆ

ಕೃತ ಯುಗದ ನಂತರ ಬದುಕಿದ ಜನ, ತ್ರೇತಾ ಯುಗದಲ್ಲಿ ಬದುಕಿದ, ದ್ವಾಪರದಲ್ಲಿ ಬದುಕಿದ ಜನ, ಈಗ ಕಲಿಯುಗದಲ್ಲಿಯೂ ಇದ್ದಾರೆ. ನಾವೇ ಬದುಕಿರಬೇಕೆಂಬುದೇನೂ ಇಲ್ಲ. ಪ್ರಳಯ ಆದರೆ ತಾನೇ ಚಿಂತಿಸಬೇಕು!...ಪ್ರಳಯ ಎಂದರೆ ನಾಶ. ಕೊನೆಗೊಳ್ಳುವಿಕೆ!

ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ ಇದು ಮಹತ್ತಾದ ಅರ್ಥ. ಪ್ರಳಯವೆಂದರೆ ನಾಶ!

ಪ್ರಜ್ಞೆ ಕಳೆದುಕೊಳ್ಳುವುದು, ಭ್ರಾಂತಿ ಎಂಬರ್ಥವು ವ್ಯಕ್ತಿಗತವಾಗಿ ಹೇಳುವುದುಂಟು. ಇದು ನಾಶ ವಿಶ್ವ ವಿನಾಶದ ಸುಳಿವು ಮನುಷ್ಯನಿಗೆ ಸುಳಿವಿದ್ದಾದರೂ ಹೇಗೆ? ಕಲ್ಪದ \/ಯುಗದ ಕೊನೆಯ ಗಳಿಗೆ ಬಂದಿದೆಯೇ? ಕಾಲ ಗಣನೆಯಲ್ಲಿ ವ್ಯತ್ಯಯವಾಗಿದೆಯೇ? ಇದು ಮಹತ್ವದ ಪ್ರಶ್ನೆ.  ಹಾಗೆಲ್ಲ ಪ್ರಕೃತಿಯು ತನ್ನಿದುಂಟಾಗುವಅವಘಡ ಸೂಚನೆಯು ಪ್ರಾಣಿ ಪಕ್ಷಿಗಳಿಗೆ ಗೋಚರಿಸಬಹುದು, ಮಾನವನಿಗಲ್ಲ.  ಪ್ರಕೃತಿಯನ್ನು ನಾಶಮಾಡಿರುವುದೇ ಮಹಾಸುಳಿವು ಎಂದು ನನಗನಿಸುತ್ತದೆ.  ಪ್ರಕೃತಿಯು ಸುಳಿವನ್ನು ಯಾವುದೇ ಕಾರಣಕ್ಕೂ ಈ ಸ್ವಾರ್ಥ ಹಾಗೂ ವಂಚಕ ಮನುಷ್ಯನಿಗೆ ಕೊಡಲಾರದು. ಭೂಭಾರ ಕಡಿಮೆ ಆಗುವುದಕ್ಕೆ ಯಾವುದೋ ಒಂದು ವಿಧಾನಬೇಕು (ಯುಧ್ಧ, ಕ್ಷಾಮ, ಪ್ರವಾಹ ಇತ್ಯಾದಿ).

ಇಂದಿನಕಾಲವು ತಂದೆ ತಾಯಿಯರಿಗೆ ಮಕ್ಕಳು ಕೊಡುವ ಹಿಂಸೆಯೇ ಪ್ರಳಯ ಸದೃಶ!. ತಂದೆ ತಾಯಿಗಳು ಶ್ರಮದಿಂದ ದುಡಿದೋ, ಭಿಕ್ಷ ಎತ್ತಿಯೋ ತಂದ ದುಡಿಮೆ/ಆಹಾರವನ್ನು ಮಕ್ಕಳು ಕಿತ್ತುಕೊಂಡು ತಿನ್ನುವುದು ಪ್ರಳಯ. ತಾನೂ ದುಡಿಯದೆ, ತಂದೆ ತಾಯಿಯರನ್ನು ಹೆಂಡತಿಯನ್ನು ರೋಲ್ ಕಾಲ್ ಮಾಡುವುದೇ ಇಂದಿನ ಪ್ರಳಯ!. ಪ್ರಜೆಗಳ ದುಡಿಮೆಯನ್ನು ಕಿತ್ತುಕೊಂಡು ತಿನ್ನುವುದೇ ಪ್ರಳಯ. ವಂಚನೆಯೇ ಪ್ರಳಯ!

ಪರೋಕಕಾರಾಯ ಪುನ್ಯಾಯ
ಪಾಪಾಯ ಪರಪೀಡಾಯ
ಇದು ಪ್ರಳಯ!

ಇದು ನಿತ್ಯ ಆಗುತ್ತಿರುವ ಸಂಗತಿ. ಇದೆ ಪ್ರಳಯೋ ಹಾದಿಯಲ್ಲಿ ಜನಜೀವನ ನಾಶ, ಜನಹಿತ ನಾಶ, ಧರ್ಮ ನಾಶ, ಸಂಸ್ಕೃತಿ ನಾಶ, ಇತಿಹಾಸ ನಾಶ, ಶಿಕ್ಷಣ ಪದ್ಧತಿ ನಾಶ ಮುಂತಾದವು  ಇದೆ ಪ್ರಳಯ!

ಕೃತಯುಗದಲ್ಲಿ ಒಬ್ಬ ವ್ಯಕ್ತಿ ಬದುಕಿದ್ದು ಹಾಗೆಯೇ ಬೆಳೆದದ್ದು ಸಂತತಿ, ಅಲ್ಲಿಂದ ತ್ರೇತಾಯುಗದ, ದ್ವಾಪರಯುಗ,  ಕಲಿಯುಗ ಅಂದರೆ ಎಂದೋ ಹುಟ್ಟಿದ ಮನುಷ್ಯನಿಂದ ಇಂದಿನ ಜನಸಂಖ್ಯೆ. ಕೋಟಿಯಿಂದ ಮಾನವ ಆಗಿದ್ದರೆ ನಮ್ಮ ಮುತ್ತಜ್ಜನ ಕಾಲದ ಕೋತಿ ಇಂದು ಮನುಷ್ಯನಾಗಬೇಕು. ಕೋತಿಯು ಹಾಗೆ ಇದೆ. ಮನುಷ್ಯನೂ ಹಾಗೆ ಇದ್ದು ಮತ್ತೆ ಮತ್ತೆ ಮನುಷ್ಯನೇ ಆಗಿದ್ದಾನೆ. ಆದ್ದರಿಂದ ಪ್ರಳಯವಾದರು ಶೇಷವಾಗಿ ಜನ ಇರುತ್ತಾರೆ. ಭೀತಿಯೇಕೆ. ಪ್ರಳಯ ಭೀತಿಯನ್ನು ಪ್ರಚಾರ ಮಾಡುತ್ತಲೇ ಪ್ರಚಾರ ಹಾಗೂ ಸಂಪಾದನೆ ಆಗುತ್ತಿದೆ. ಇದೆ ಒಂದು ವಿಸ್ಮಯಕಾರಿ ಸಂಗತಿ.

3 comments:

  1. ಪ್ರಳಯ ಒಂದು ವ್ಯವಸ್ಥೆಯ ಭಾಗ...ಅದನ್ನು ಸರಿ ಮಾಡಿಕೊಳ್ಳುವ ಜಾಣ್ಮೆ ನಮಗಿರಬೇಕು..ಒಳ್ಳೆಯ ಲೇಖನ ಚಿಕ್ಕಪ್ಪ.

    ReplyDelete
    Replies
    1. ಪ್ರಳಯ ಭೀತಿ ?.... ಅಳಿವಿಲ್ಲ ವಿಶ್ವಕ್ಕೆ
      ಪೂಜ್ಯ ಡಿ.ವಿ.ಜಿ. ಅವರು ಹೇಳಿರುವಂತೆ ಅಳಿವಿಲ್ಲ ವಿಶ್ವಕ್ಕೆ--
      ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ I
      ಕಡಲೊಳೆತ್ತಲೋ ಹೊಸದ್ವೀಪವೇಳುವುದು II
      ಕಳೆಯುತೊoದಿರಲಿಲ್ಲಿ, ಬೆಳೆವುದಿನ್ನೊಂದೆಲ್ಲೋI
      ಅಳಿವಿಲ್ಲ ವಿಶ್ವಕ್ಕೇ - ಮಂಕುತಿಮ್ಮ II

      Delete
  2. ಕರ್ಮವೇ ಪ್ರಧಾನ ( ' KARMA' IS SUPREME)
    ಹಿಂದೆ ಮಾಡಿದ ಕರ್ಮಗಳು ಯಾವುದಾದರು ರೂಪದಲ್ಲಿ (ಒಳ್ಳಯದಾಗಲಿ/ ಕೆಟ್ಟದಾಗಲಿ ) ನಮ್ಮಅನುಭವಕ್ಕೆ ಬರುತ್ತದೆ . ಕರ್ಮವೆಂದರೆ ಧನಾತ್ಮಕ / ಋಣಾತ್ಮಕ ತರಂಗಗಳು(Positive /negative vibrations ). ಹೇಗೆಂದರೆ ಕೆಲವು ದಿನಗಳು ಮನೆಯಿಂದ ಹೊರಗಿದ್ದು ಹಿಂದಿರುಗಿದಮೇಲೆ ಮನೆಯಲ್ಲಿರುವ ಎಲ್ಲ ಪದರ್ಥದಮೇಲೆ (ನೋಡಬಹುದಾದ) ದೂಳಿನ ಕಣಗಳು ಸಂಗ್ರಹವಾಗಿರುವಂತೆ, ನಾವು ಮಾಡುವ ಪ್ರತಿಯೊಂದು ಕರ್ಮದಲ್ಲಿಯೂ ಒಂದೊಂದು ಫಲವು ಸಂಚಿತ ವಾಗುತ್ತವಾಗುತ್ತಲೇ ಇರುತ್ತದೆ. ಅದಕ್ಕೆ ಫಲವನ್ನು ಅನುಭವಿಸುತ್ತೇವೆ. ಬಿಸಿಲಿನ ಚಲನೆ (ನೆರಳಿನ ), ಕಣ್ಣಿನ ರೆಪ್ಪಯ ಚಲನೆ, ಗಡಿಯಾರದ ಮುಳ್ಳಿನ ಚಲನೆ ಹೇಗೆ ಅರಿವಿಲ್ಲದಯೇ ನೋಡನೋಡುತ್ತಲೇ ಉಂಟಾಗುವುದೋ ಹಾಗೆಯೇ ಕರ್ಮದ ಪರಿಣಾಮವೂ ಉಂಟಾಗುವುದು.' ವಿದ್ಧ್ಯುತ್' ' ತಂತಿಯ ಮೂಲಕ ವಾಹಕ ವಾಗುವುದೋ(conduct ) ಇದನ್ನು ನಾವು ಹೇಗೆ ಕಾಣಲಾರೆವೋ ಅದರನ್ತಯೇ 'ಕರ್ಮದ ಫಲ'. ಕರ್ಮದ ಫಲವನ್ನು ಜಾತಕ ದಿಂದ ತಿಳಿಯಬಹುದಾಗಿರುತ್ತೆ. ಭಗವಂತನಿಂದ (ಒಳ್ಳಯದಾಗಲಿ/ ಕೆಟ್ಟದಾಗಲಿ ) ಪರಿಹರಿಸಲು ಸಾಧ್ಯವಾಗುವಂತದ್ದಾಗಿರುವುದಿಲ್ಲ ಅನುಭವಿಸಲೇ ಬೇಕಾಗಿರುತ್ತೆ. ಹಾಗಂದಮೇಲೆ ಭಗವಂತನು ಕರ್ಮಕ್ಕೇ ಅಧೀನ.

    ದೇವತೆಗಳನ್ನು ನಮಸ್ಕರಿಸೋಣವೆಂದರೆ ಅವರು ಆ ವಿಧಿಗೆ ಅಧೀನರು.ವಿಧಿಗೆ ನಮಸ್ಕರಿಸೋಣವೆಂದರೆ ವಿಧಿಯು ಪ್ರತಿಯೊಂದು ಕರ್ಮಕ್ಕು ನಿಗಧಿತ ಫಲವನ್ನು ಮಾತ್ರ ಕೊಡುತ್ತದೆ. ಆ ಫಲವು ಕರ್ಮಾಧೀನವೆಂದಮೇಲೆ ದೇವತೆಗಳೇನು ಮಾಡಿಯಾರು? ವಿಧಿಯಿಂದ ತಾನೇ ಏನು ಪ್ರಯೋಜನ? ಆದುದರಿಂದ ಯಾವ ಕರ್ಮದ ಮೇಲೆ ವಿಧಿಗೂ, ದೇವರಿಗೂ ಅಧಿಕಾರವಿಲ್ಲವೋ ಆ ಕರ್ಮಕ್ಕೆ ನಮ್ಮ ನಮಸ್ಕಾರ. ಕರ್ಮವನ್ನು ಜಾತಕ ದಿಂದಲೂ, ಪರಿ- ಹಾರವನ್ನು ಜ್ಯೋತಿಷ ಜ್ಞಾನದಿಂದಲೂ (ತಿಳಿದು) ಪ್ರಕೃತಿಯಲ್ಲಿ ಪ್ರಾಣಿ,ಪಕ್ಷಿ,ಗಿಡ-ಮರ ಪಿತೃ ಗಳಿಗೆ ಸಮರ್ಪಣೆ ಮಾಡಿದರೆ ಕರ್ಮದ ತೀವ್ರತೆಯು ಕಡಿಮೆಯಾಗಲು ಸಾಧ್ಯ, ಕೆಲವೊಮ್ಮೆ ಪರಿಹಾರವೂ ಆಗಬಹುದು.
    karma (noble or bad deed) -destiny deciding factor. Can be known through the position of the planets and star at birth.
    Nature, Knowledge and Truth are the sources of Gods' existence. Those who surrenders is the winner of ' Karma'.

    ReplyDelete