Sunday 7 April 2013

ತಂದೆ-ತಾಯಿ ಇವರು ಸ್ವಭಾವದಿಂದಲೇ ಹಿತೈಷಿಗಳು, ಇವರನ್ನು ವಂಚಿಸಿವ, ತಿರಸ್ಕರಿಸುವ, ದ್ವೇಷಿಸುವ ಮಕ್ಕಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾರನ್ನು ಬೇಕಾದರೂ ಬಲಿಕೊಡುತ್ತಾರೆ. ತಂದೆ-ತಾಯಿಯರನ್ನು ಬೇರ್ಪಡಿಸಿ ಆನಂದಿಸುತ್ತಾರೆ. ತಾವೂ ನಾಶಹೊಂದಿ  ಕುಟುಂಬವನ್ನು ಹಾಳುಗೆಡುಹುತ್ತಾರೆ. ಅವರು ಪಶ್ಚಾತ್ತಾಪ ಪಡುವುದಿಲ್ಲ.. ಕಳ್ಳರ
ದರೋಡೆಕೋರರ ಕೊಲೆಗಡುಕರಿಂದಾದ ಆಘಾತವು ಹೆಚ್ಹೆನಿಸುವುದಿಲ್ಲ. ಮಕ್ಕಳೇ ಹಾಗಾದಾಗ ದುಃಖಾಂತ ಜೀವನವಾಗಿ  ತಂದೆತಾಯಿಯರ ಸಾವಿಗೆ ಕಾರಣರಾಗುತ್ತಾರೆ,ಅಷ್ಟೇ ಅಲ್ಲ ಆ ಮಕ್ಕಳು ಮಹಾ ಪಾಪಿಗಳಾಗಿ ಉಳಿಯುತ್ತಾರೆ.

Tuesday 2 April 2013

               ದೈವ ಶಕ್ತಿ (ಅದೃಷ್ಟ) ಮತ್ತು ಪುರುಷ ಪ್ರಯತ್ನ    

     ಯಾವ  ಕೆಲಸವೆ ಆಗಲಿ ಅದೃದೃಷ್ಟದಿಂದಲೂ ಪುರುಶಪ್ರಯತ್ನದಿಂದಲೂ ಲಭಿಸುತ್ತದೆ. ಪೂರ್ವಜನ್ಮದಿಂದ ಅರ್ಜಿತವಾದ ಪುರುಷ ಶಕ್ತಿಯೇ ದೈವವೆಂದೂ ಅದೃಷ್ಟವೆಂದೂ ಹೇಳಲ್ಪಡುತ್ತದೆ. ಅದೃಷ್ಟ ಹಾಗು ಕರ್ಮ ಫಲಗಳು ಯಾವಾಗಲೂ  ಇರುವ ತತ್ವಗಳೇ ಆಗಿವೆ. ಇವೆರಡು ಸೇರದೇ ಯಾವ ಕೆಲಸವೂ ಆಗುವುದಿಲ್ಲ. ಪುರುಷ ಪ್ರಯತ್ನವನ್ನು- Free ವಿಲ್ ಎಂದೂ, ದೈವ ವನ್ನು- Destiny(ಪ್ರಾರಬ್ಧ ಕರ್ಮ ಅ-ದೃಷ್ಟ )  ಎಂದೂ,
ಪ್ರಾರಬ್ಧವು ಪೂರ್ವ ಜನ್ಮದ ಕರ್ಮದ ಫಲವೆಂದೂ,ಎದು ದೇಹಕ್ಕೆ ಸಂಬಂಧಪಟ್ಟಿದ್ದು ಎಂದೂ ಹೇಳುತ್ತಾರೆ. 
      ಮನುಷ್ಯನಿಗೆ ಆತ್ಮಜ್ನಾನವು  ಪುರುಷ ಶಕ್ತಿ-ದೈವಶಕ್ತಿ ಗಳೆರಡನ್ನೂ ಮೀರಿದೆ. ಸುಖ-ದುಃಖ,ಇಷ್ಟ-ಅನಿಷ್ಟ ಏರು-ಪೇರುಗಳು  ಪೂರ್ವಜನ್ಮದ ಕರ್ಮದ ಫಲವಾಗಿ ಈಶ್ವರೇಚ್ಹಾನುಸಾರವಾಗಿ ನಡೆಯುತ್ತದೆ. ಇವುಗಳು ನಡೆಯಲು ಫಲಿಸಲು ಕೆಲವೊಂದು ಪೂರಕಗಳ, ಕಾರಕಗಳ (ಅಪೇಕ್ಷತೆ) ಅವಶ್ಯಕತೆ ಇರುತ್ತದೆ. ದೇವರು,ಕಾಲ,ಕರ್ಮ,ಮಂತ್ರ,ತಂತ್ರ,ಯಂತ್ರ ಔಷಧಿ,ಜಪ,ತಪ,ದ್ರವ್ಯಾದಿಗಳ ಸ್ವಭಾವಇತ್ಯಾದಿಗಳು ಆ ಕಾರಕಗಳು. ಇದರ ಭವಿಷ್ಯನುಡಿಯಲು ಹಲವು ಸಲಕರಣೆಗಳು ಬೇಕಾಗುತ್ತದೆ. ವ್ಯಕ್ತಿಯ ಜಾತಕವು ಪ್ರಧಾನವಾಗಿ ಬೇಕಾಗುತ್ತದೆ. 
ಎರಡು ಟಗರುಗಳಂತೆ ದೈವ ಹಾಗು ಪುರುಷ ಪ್ರಯತ್ನಗಳು ಹೋರಾಡುತ್ತವೆ. ಯಾವುದು ಬಲವಂತವಾಗಿರುತ್ತದೋ ಅದು ಒಂದೇ ಕ್ಷಣದಲ್ಲಿ ಗೆಲ್ಲುವುದು. ಗೆಲುವು ಸೋಲು ಕರ್ಮದ ಫಲವೇ ಆಗಿರುತ್ತದೆ. 
      ಧರ್ಮ,ಕರ್ಮ, ನಂಬಿಕೆ,ವಿಶ್ವಾಸ,ಶ್ರದ್ಧೆ,ಭಕ್ತಿ,ಪ್ರಾಮಾಣಿಕತೆ,ಸತ್ಯ ವಚನ,ನಿಷ್ಠೆ,ವಿಧೇಯತನ ಮುಂತಾದುವುಗಳು ಪ್ರತಿಕ್ರಿಯಿಸುತ್ತವೆ. ಇವುಗಳಿಗೆ ವಿರುದ್ಧವಾದುದೆಲ್ಲವೂ ಅದೃಷ್ಟವನ್ನು ಕ್ಷೀಣಿಸುವಂತೆ ಮಾಡುತ್ತವೆ. ಸದಾಚಾರದಿಂದ ಪಾಪವೂ,ದುರಾಚಾರದಿಂದ ಪುಣ್ಯವೂ ಕ್ಷೀಣಿಸುವುದು. ಮ್ರುಗರಾಜನಾದ ಸಿಂಹವೂ ಸ್ವತಃ ಬೇಟೆಯಾಡಿ ಜೀವಿಸುತ್ತದೆ, ನಾಯಿಯೂ ಕೂಡ ಹತ್ತರುಬೀದಿ ಸುತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ,ಅದೃಷ್ಟವನ್ನು ಕಾಯುವುದಿಲ್ಲವಷ್ಟೇ!
       ಕಾಮಧೇನುವಿಗಾಗಿ ಕೌಶಿಕ ರಾಜನು(ಮುಂದೆ ವಿಶ್ವಾಮಿತ್ರ)  ಬ್ರಹ್ಮರ್ಷಿ ವಸಿಷ್ಟರೊಡನೆ ಸೊತುಸೊರಗಿ ವಸಿಷ್ಟರ ಅಣತಿಯಂತೆ ತಪಸ್ಸಿಗೆ ತೆರಳಿ ಬ್ರಹ್ಮರ್ಷಿ ಪಟ್ಟಕ್ಕೇರುತ್ತಾನೆ. ,ಇಲ್ಲಿ ಅದೃಷ್ಟವು ಕೆಲಸ ಮಾಡಿಲ್ಲ, ಅತಿಯಾದ ಪ್ರಯತ್ನ,ನಿಷ್ಠೆ, ತಪಸ್ಸು,ಧ್ಯಾನ ಇವುಗಳನ್ನು ಸಾಧಿಸಿ ಗೆಲ್ಲುವನು.  ಅದೃಷ್ಟಕ್ಕೆ ಪುರುಷ ಪ್ರಯತ್ನವೆ ಬುನಾದಿ.        (ಮುಂದುವರಿಯುವುದು)