Sunday 16 December 2012

ಪ್ರಳಯದ ಭೀತಿ! ಒಂದು ಚಿಂತನೆ

ಚಿತ್ರ ಕೃಪೆ: ಅಂತರ್ಜಾಲ 

ಪ್ರತಿಯೊಬ್ಬರೂ ತಿಳಿಯಬೇಕಾದ ಅಂಶವೆಂದರೆ ಪ್ರಕೃತಿ ಯಾವುದೇ ಆಘಾತವನ್ನು ಹೇಳಿ, ಸೂಚನೆ ನೀಡಿ ಜನರಿಗೆ ತಿಳಿಸುವಂತಹ ಪ್ರವೃತಿಯಿರುವುದಿಲ್ಲ. ಯಾವುದೇ ಸುಳಿವಿಲ್ಲದೆಯೇ ಅಗೋಚರವಾಗಿ ಇದ್ದಕ್ಕಿದ್ದಂತೆ ಆಗುವುದೇ ಪ್ರಳಯ. ಕ್ಯಾತರಿನ, ಸುನಾಮಿಯಂತಹ ಪ್ರಚಂಡ ಅಲೆಗಳು ಭೂಮಿಯ ಮೇಲೆ ಅಪ್ಪಲಿಸಿದಾಗಲೂ ಮುನ್ನೆಚ್ಚರಿಕೆಯ ಭೀತಿ ಆವರಿಸಿತ್ತು. ತಡೆಯಲು ಸಾಧ್ಯವಾಗಲೇ ಇಲ್ಲ ಎನ್ನುವುದನ್ನು ಮರೆಯಬಾರದು.

೧೯೬೧-೬೨ರ ಸಮಯದಲ್ಲಿ ಉಂಟಾದ ಅಷ್ಟ ಗ್ರಹ ಕೂಟವು ಇಡಿ ಬ್ರಹ್ಮಾಂಡವನ್ನೇ ಅಲ್ಲಾಡಿಸುವಂತಾಗಬೇಕಿತ್ತು, ಹಾಗಾಗಲೇ ಇಲ್ಲ. ಯಾವುದೇ ಪ್ರಳಯ ಜಲ, ವಾಯು, ಅಗ್ನಿ, ಪ್ರಳಯ ಆಗುತ್ತಲೂ ಇರಲಿಲ್ಲ. ಆಗ ಮಾಧ್ಯಮಗಳು ಕೂಡ ಜನ ಹುಚ್ಹೆಬಿಸುವ ಭೀತಿಯನ್ನುಂಟು ಮಾಡುವ ಪ್ರಚಾರ ಮಾಡುತ್ತಿರಲಿಲ್ಲ.

ಜನರಿಗೆ ಧರ್ಮ ಜಾಗೃತಿ, ಜ್ಞಾನ ಜಾಗೃತಿ, ಆಹಾರ ಜಾಗೃತಿ, ಸಮಯ ಶಿಸ್ತಿನ ಜಾಗೃತಿ, ಶಿಕ್ಷಣ ಜಾಗೃತಿ, ಬದುಕುವ ಜಾಗೃತಿ ಹೇಳಿಕೊಡುವ ಗುಣಮಟ್ಟದ ಮಾಧ್ಯಮಗಳು ತಲೆ ಎತ್ತಬೇಕು. ಕೊಲೆ, ಅಪರಾಧ, ಕೆಟ್ಟ ನೃತ್ಯ, ಮನೆಗಳನ್ನು ಮನಗಳನ್ನು, ಸಂಸಾರಗಳನ್ನು ಹಾಳು ಮಾಡುವ ಧಾರಾವಾಹಿಗಳು, ರಾಜಕೀಯ ದೊಂಬರಾಟದ ಪ್ರಚಾರ, ಹಾಗೂ ಜನ ಜೀವನದಲ್ಲಿ ಉಂಟಾಗುತ್ತಿರುವ ಗೊಂದಲವೇ ಪ್ರಳಯ ಸದೃಶ, ನಾಗರೀಕತೆ, ಸಂಸ್ಕಾರ, ಧರ್ಮ, ನೀತಿ ಮುಂತಾದವುಗಳಿಂದ ಕೂಡಿರಬೇಕಾದ ಅಂಶವೇ ನಾಶವಾಗುತ್ತಿರುವುದೇ "ಪ್ರಳಯ".
   
ಶಿಕ್ಷಣ ಬಿಟ್ಟ ವಿದ್ಯಾರ್ಥಿ, ವಿಧ್ಯಾರ್ಥಿನಿಯರು, ಅಲ್ಲದೆ ಮನೆಯಲ್ಲಿಯೇ ಕುಳಿತುಕೊಂಡು ದೂರದರ್ಶನ ನೋಡಿಕೊಂಡು ತಾವೂ ಹಾಳಾಗಿ ಕುಟುಂಬವನ್ನೇ ಒಂದಲ್ಲಾ ಒಂದು ರೀತಿಯಲ್ಲಿ ಬಲಿ ತೆಗೆದುಕೊಳ್ಳುತ್ತಿರುವುದೇ "ಪ್ರಳಯ"

ಪ್ರಕೃತಿ ವಿಕೋಪಕ್ಕೆ ಎಲ್ಲಾ ಬಲಿಯಾಗುತ್ತಾರೆ ಯಾರೂ ಹೊರತಲ್ಲ. ನಾಗರಿಕತೆಯಲ್ಲಿ ಆಗುತ್ತಿರುವ ದುಷ್ಟ ಸಂಸ್ಕೃತಿ, ದುರಾಚಾರ, ದುರಾಡಳಿತ, ಇದರ ಬಗ್ಗೆ ಜಾಗೃತಿ ಮೂಡಿಸಿ ಜನರನ್ನು ಸನ್ಮಾರ್ಗದಲ್ಲಿ ತಿರುಗಿಸಬೇಕಾದುದು ಮಾಧ್ಯಮದ ಕಾರ್ಯವಾಗಬೇಕು, ವಿಧ್ವಾಂಸರ ಕಾರ್ಯವಾಗಬೇಕು, ಜ್ಯೋತಿಷಿಗಳ ಕಾರ್ಯವಾಗಬೇಕು,. ಹೀಗಾಗುತ್ತಿಲ್ಲ ಇದೆ ಪ್ರಳಯ.
ಪ್ರಳಯವೆಂದರೆ ನಾಶ. ಪ್ರಳಯವಾಗುತ್ತಿದೆಯೆಂದು ಓಡಿ ಎಲ್ಲಿಗೆ ಹೋಗುತ್ತೀರಿ? ಏನು ಮಾಡುತ್ತೀರಿ? ಇದೊಂದು ಕೃತಕ ಭೀತಿಯನ್ನುಂಟು ಮಾಡುವ ಸೋಗು ಪ್ರಳಯವಾಗುತ್ತದೆಯೆಂದಾಗ ಎಲ್ಲ ರೀತಿಯ ದುರಾಚಾರ ಹೆಚ್ಚುವುದು.  ಜನರು ಸಾಲ ಸೋಲ ಮಾಡಿ ಕೆಟ್ಟದ್ದನ್ನು ಮಾಡಿ ಹೇಗೋ ಪ್ರಳಯವಾಗುತ್ತದೆಯೆಂಬ ಗುಂಗಿನಿಂದ ಇದ್ದು ವಂಚಿತರಾಗುತ್ತಾರೆ. ಪ್ರಳಯವಾಗದಿದ್ದರೆ? ಏನೂ ಆಗದಿದ್ದರೆ ಆಗ ಆ ವ್ಯಕ್ತಿಯ ಜೀವನದಲ್ಲಿ ಖಂಡಿತವಾಗಿಯೂ  ಪ್ರಳಯ ಸದೃಶ ಸ್ಥಿತಿಯುಂಟಾಗುತ್ತದೆ.

ದೇಶದಲ್ಲಿ ನುಸುಳುತ್ತಿರುವ ಆತಂಕವಾದಿಗಳನ್ನು ಕಂಡು ಹಿಡಿಯುವುದಕ್ಕಾಗುತ್ತಿಲ್ಲ.  ಸಿ.ಸಿ. ಟಿವಿ, ಕ್ಯಾಮೆರ  ಮುಂತಾದ ಸೌಕರ್ಯವಿದ್ದರೂ ಅಪಘಾತಗಳ ಸುಳಿವು ಗೊತ್ತಾಗುತ್ತಿಲ್ಲ. ದೇಶ ಲೂಟಿ ಮಾಡಿ "ಕಪ್ಪು ಹಣ"ದ ರಕ್ಷಣೆ ಮಾಡುತ್ತಾ ದೇಶವನ್ನು ಕಣಗಳಾಗಿ ಮಾಡುತ್ತಿರುವ ರಾಜ್ಯವಾಳುತ್ತಿರುವವರ ಪ್ರಚಾರ ಮಾಡುತ್ತಿಲ್ಲ. ಇದು ಪ್ರಳಯ!. ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಸಂಗತಿ ಆಗಿದೆ. ಇದೆ ಪ್ರಳಯ!

ಕೃಷಿ ಕರಗುತ್ತಿದೆ, ವಿದ್ಯಾ, ಶಿಕ್ಷಣ ಕ್ಷೇತ್ರ ಕರಗುತ್ತಿದೆ, ಗುಣ ಮಟ್ಟದ ಶಿಕ್ಷಕ, ವಿಧ್ಯಾರ್ಥಿ,ಗಳಿಲ್ಲದೆ ವಿಧ್ಯಾಕ್ಷೇತ್ರ ಕರಗುತ್ತಿದೆ.  ಇದು ಪ್ರಳಯ! ಇದು ಪ್ರಳಯ ಜನರಿಗೆ ನೀತಿ ಹೇಳುವಂತಾಗಬೇಕು, ಭೀತಿಯುಂಟು ಮಾಡುವಂತಾಗಬಾರದು.

ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಬರುವ ಜನರು ಮಾಧ್ಯಮವನ್ನು ಸಮರ್ಪಕವಾಗಿ ಉಪಯೋಗ ಮಾಡಿಕೊಳ್ಳದೆ ಜನರ ಹಾವಳಿಯು ದಿನೇ ದಿನೇ ಹೆಚ್ಚುತ್ತಿದೆ. ಇದು ಪ್ರಳಯ!  ಆಸ್ಪತ್ರೆಗೆ ಎದೆ ನೋವು ಅಂತ ಹೋದರೆ ಕನಿಷ್ಠ ಚಿಕಿತ್ಸೆ ಎಂದರೆ ರುಪಾಯಿ ಒಂದು ಲಕ್ಷದ್ದು! ತಲೆನೋವು ಎಂದು ಹೋದರೆ ರೂ.ಐವತ್ತು ಸಾವಿರ.  ಮೂಳೆ ಮುರಿತ ಎಂದು ಹೋದರೆ ಕನಿಷ್ಠ ಶಸ್ತ್ರ ಚಿಕಿತ್ಸೆ ಮಡಿ ಉಕ್ಕಿನ/ಕಬ್ಬಿಣದ ರಾಡ್ ವ್ಯಕ್ತಿಯನ್ನು ಅಬಲನನ್ನಾಗಿ ಮಾಡುವುದೇ ಪ್ರಳಯ!

ಜಾಗೃತಿ ಮೂಡಿಸಿಕೊಳ್ಳಿ! ಪ್ರಕೃತಿಯು ಅಷ್ಟೊಂದು ಸುಲಭವಾಗಿ ರಹಸ್ಯ ಬಿಟ್ಟುಕೊಡುವುದಿಲ್ಲ  ಈವರೆಗೂ ಬಿಟ್ಟು ಕೊಟ್ಟಿಲ್ಲ. ಯಾವುದೇ ಕಾರಣಕ್ಕೂ, ಎಂತಹ  ಬುದ್ಧಿವಂತನೂ, ವಿಜ್ಞಾನಿಯೂ, ಜ್ಯೋತಿಷಿಯೂ ಕೂಡ ಪ್ರಕೃತಿ ರಹಸ್ಯವನ್ನು ಭೆದಿಸಲಾರ. ಪ್ರಾಣಿ ಪಕ್ಷಿಗಳಿಗೆ ಸಾಧ್ಯವಾಗಬಹುದು. ಜಗತ್ತಿನಲ್ಲಿ ಭೂಭಾರ ಕಡಿಮೆ ಆಗುವುದಕ್ಕೆ ಮಾತ್ರ ಹಲವು ಪ್ರಕೃತಿ ಸಹಜವಾಗಿ ಪ್ರವಾಹ, ಬಿರುಗಾಳಿ, ಅಗ್ನಿ ಪರ್ವತ, ಅತಿವೃಷ್ಟಿ/ಅನಾವೃಷ್ಟಿ  ಮುಂತಾದುವು ಜರಗುಬಹುದು. ಇಂತಹ ಸಂದರ್ಭಗಳು ಕೆಲವೊಮ್ಮೆ ಬಂದು ಜನಸಂಖ್ಯೆ ಕಡಿಮೆ ಆಗಲು ಸಾಧ್ಯವಾಗಬಹುದು. ದುಷ್ಟ ಆಡಳಿತ, ಕೆಟ್ಟ ಆಹಾರದ ಪೂರೈಕೆ, ಪರಿಸರ ಮಾಲಿನ್ಯ ಮುಂತಾದವು ನಿತ್ಯವೂ ಜನರನ್ನು, ಜನಜೀವನವನ್ನು ನಾಗರೀಕತೆಯನ್ನು ಆರೋಗ್ಯವನ್ನು ಕೆಡಿಸುತ್ತದೆ. ಇದು ಪ್ರಳಯ ಸದೃಶ!  

ಮಾನವ ಕೃತ ವಿಶ್ವ ವ್ಯಾಪಾರ ಕೇಂದ್ರ (WTC) ಅಂತಹ ನಾಶ ಸುಳಿವು ದೊರೆಯಲಿಲ್ಲ. ತಾಜ್ ಹೋಟೆಲ್ ಮೇಲೆ ಆಕ್ರಮಣ, ಮುಂಬೈ ಮೇಲೆ ದಾಳಿ, ಸಂಸತ್ ಭವನದ ಮೇಲೆ ಧಾಳಿ, ಇತಿಹಾಸ ಪುಟಗಳಲಿ ದೇಶದ್ರೋಹಿಗಳ ಪಾತ್ರ ಪ್ರಳಯ ಸದೃಶ. ಇಂದಿನ ದಿನಗಳಲ್ಲಿ ಮೋಸ ವಂಚನೆ, ದುರಾಡಳಿತ, ಲಂಚ, ಕೊಲೆ, ಸುಲಿಗೆ, ನೀರು, ಆಹಾರದ ಭೀತಿ ಪ್ರಳಯ ಸದೃಶ. ಹೇಳುತ್ತಾ ಹೋದರೆ ಒಂದು ಸಹಸ್ರ ಪುಟಗಳೇ ಆಗುತ್ತದೆ

ಕೃತ ಯುಗದ ನಂತರ ಬದುಕಿದ ಜನ, ತ್ರೇತಾ ಯುಗದಲ್ಲಿ ಬದುಕಿದ, ದ್ವಾಪರದಲ್ಲಿ ಬದುಕಿದ ಜನ, ಈಗ ಕಲಿಯುಗದಲ್ಲಿಯೂ ಇದ್ದಾರೆ. ನಾವೇ ಬದುಕಿರಬೇಕೆಂಬುದೇನೂ ಇಲ್ಲ. ಪ್ರಳಯ ಆದರೆ ತಾನೇ ಚಿಂತಿಸಬೇಕು!...ಪ್ರಳಯ ಎಂದರೆ ನಾಶ. ಕೊನೆಗೊಳ್ಳುವಿಕೆ!

ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ ಇದು ಮಹತ್ತಾದ ಅರ್ಥ. ಪ್ರಳಯವೆಂದರೆ ನಾಶ!

ಪ್ರಜ್ಞೆ ಕಳೆದುಕೊಳ್ಳುವುದು, ಭ್ರಾಂತಿ ಎಂಬರ್ಥವು ವ್ಯಕ್ತಿಗತವಾಗಿ ಹೇಳುವುದುಂಟು. ಇದು ನಾಶ ವಿಶ್ವ ವಿನಾಶದ ಸುಳಿವು ಮನುಷ್ಯನಿಗೆ ಸುಳಿವಿದ್ದಾದರೂ ಹೇಗೆ? ಕಲ್ಪದ \/ಯುಗದ ಕೊನೆಯ ಗಳಿಗೆ ಬಂದಿದೆಯೇ? ಕಾಲ ಗಣನೆಯಲ್ಲಿ ವ್ಯತ್ಯಯವಾಗಿದೆಯೇ? ಇದು ಮಹತ್ವದ ಪ್ರಶ್ನೆ.  ಹಾಗೆಲ್ಲ ಪ್ರಕೃತಿಯು ತನ್ನಿದುಂಟಾಗುವಅವಘಡ ಸೂಚನೆಯು ಪ್ರಾಣಿ ಪಕ್ಷಿಗಳಿಗೆ ಗೋಚರಿಸಬಹುದು, ಮಾನವನಿಗಲ್ಲ.  ಪ್ರಕೃತಿಯನ್ನು ನಾಶಮಾಡಿರುವುದೇ ಮಹಾಸುಳಿವು ಎಂದು ನನಗನಿಸುತ್ತದೆ.  ಪ್ರಕೃತಿಯು ಸುಳಿವನ್ನು ಯಾವುದೇ ಕಾರಣಕ್ಕೂ ಈ ಸ್ವಾರ್ಥ ಹಾಗೂ ವಂಚಕ ಮನುಷ್ಯನಿಗೆ ಕೊಡಲಾರದು. ಭೂಭಾರ ಕಡಿಮೆ ಆಗುವುದಕ್ಕೆ ಯಾವುದೋ ಒಂದು ವಿಧಾನಬೇಕು (ಯುಧ್ಧ, ಕ್ಷಾಮ, ಪ್ರವಾಹ ಇತ್ಯಾದಿ).

ಇಂದಿನಕಾಲವು ತಂದೆ ತಾಯಿಯರಿಗೆ ಮಕ್ಕಳು ಕೊಡುವ ಹಿಂಸೆಯೇ ಪ್ರಳಯ ಸದೃಶ!. ತಂದೆ ತಾಯಿಗಳು ಶ್ರಮದಿಂದ ದುಡಿದೋ, ಭಿಕ್ಷ ಎತ್ತಿಯೋ ತಂದ ದುಡಿಮೆ/ಆಹಾರವನ್ನು ಮಕ್ಕಳು ಕಿತ್ತುಕೊಂಡು ತಿನ್ನುವುದು ಪ್ರಳಯ. ತಾನೂ ದುಡಿಯದೆ, ತಂದೆ ತಾಯಿಯರನ್ನು ಹೆಂಡತಿಯನ್ನು ರೋಲ್ ಕಾಲ್ ಮಾಡುವುದೇ ಇಂದಿನ ಪ್ರಳಯ!. ಪ್ರಜೆಗಳ ದುಡಿಮೆಯನ್ನು ಕಿತ್ತುಕೊಂಡು ತಿನ್ನುವುದೇ ಪ್ರಳಯ. ವಂಚನೆಯೇ ಪ್ರಳಯ!

ಪರೋಕಕಾರಾಯ ಪುನ್ಯಾಯ
ಪಾಪಾಯ ಪರಪೀಡಾಯ
ಇದು ಪ್ರಳಯ!

ಇದು ನಿತ್ಯ ಆಗುತ್ತಿರುವ ಸಂಗತಿ. ಇದೆ ಪ್ರಳಯೋ ಹಾದಿಯಲ್ಲಿ ಜನಜೀವನ ನಾಶ, ಜನಹಿತ ನಾಶ, ಧರ್ಮ ನಾಶ, ಸಂಸ್ಕೃತಿ ನಾಶ, ಇತಿಹಾಸ ನಾಶ, ಶಿಕ್ಷಣ ಪದ್ಧತಿ ನಾಶ ಮುಂತಾದವು  ಇದೆ ಪ್ರಳಯ!

ಕೃತಯುಗದಲ್ಲಿ ಒಬ್ಬ ವ್ಯಕ್ತಿ ಬದುಕಿದ್ದು ಹಾಗೆಯೇ ಬೆಳೆದದ್ದು ಸಂತತಿ, ಅಲ್ಲಿಂದ ತ್ರೇತಾಯುಗದ, ದ್ವಾಪರಯುಗ,  ಕಲಿಯುಗ ಅಂದರೆ ಎಂದೋ ಹುಟ್ಟಿದ ಮನುಷ್ಯನಿಂದ ಇಂದಿನ ಜನಸಂಖ್ಯೆ. ಕೋಟಿಯಿಂದ ಮಾನವ ಆಗಿದ್ದರೆ ನಮ್ಮ ಮುತ್ತಜ್ಜನ ಕಾಲದ ಕೋತಿ ಇಂದು ಮನುಷ್ಯನಾಗಬೇಕು. ಕೋತಿಯು ಹಾಗೆ ಇದೆ. ಮನುಷ್ಯನೂ ಹಾಗೆ ಇದ್ದು ಮತ್ತೆ ಮತ್ತೆ ಮನುಷ್ಯನೇ ಆಗಿದ್ದಾನೆ. ಆದ್ದರಿಂದ ಪ್ರಳಯವಾದರು ಶೇಷವಾಗಿ ಜನ ಇರುತ್ತಾರೆ. ಭೀತಿಯೇಕೆ. ಪ್ರಳಯ ಭೀತಿಯನ್ನು ಪ್ರಚಾರ ಮಾಡುತ್ತಲೇ ಪ್ರಚಾರ ಹಾಗೂ ಸಂಪಾದನೆ ಆಗುತ್ತಿದೆ. ಇದೆ ಒಂದು ವಿಸ್ಮಯಕಾರಿ ಸಂಗತಿ.

Friday 24 August 2012

ಶ್ರೀ ಕೃಷ್ಣ ನು  ಅರ್ಜುನನನ್ನು ಒಂದು ಸಾಧನವನ್ನಾಗಿಟ್ಟುಕೊಂಡು ಮನುಷ್ಯನಲ್ಲಿರುವ ಪಂಚೆಂದ್ರಿಯಾದಿ  ಅರಿಷಡ್ವರ್ಗಗಳನ್ನು ಹತೋಟಿ ಅಥವಾ ನಾಶ ಮಾಡುವುದಕ್ಕೆ ಬೇಕಾದ ಮಾರ್ಗವನ್ನು ಸೂಚಿಸುತ್ತಿದ್ದಾನೆ. ಆತ್ಮವನ್ನು ಬೆಂಕಿಯಲ್ಲಾಗಲಿ,ಶಸ್ತ್ರದಲ್ಲಾಗಲಿ,  ನೀರಿನಲ್ಲಾಗಲಿ ಯಾವುದರಿಂದಲೂ ಕೊಲ್ಲಲಾಗುವುದಿಲ್ಲ. ಆತ್ಮವು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಕರ್ಮಕ್ಕೆ ತಕ್ಕಂತೆ ವರ್ಗಾಯಿಸಲ್ಪಡುವುದು, ಯಾವುದೇ ಕಾರಣಕ್ಕೂ ನಾಶವಾಗುವುದಿಲ್ಲ.
ಯುದ್ಧವು ಧರ್ಮ ಹಾಗು ಅಧರ್ಮಗಳ ನಡುವೆ, ಯುದ್ಧವು ವ್ಯಕ್ತಿಗತವವಾಗಿಲ್ಲ ಎಂಬುದು ಶ್ರೀಕೃಷ್ಣನ ನಿಲುವು.      
ಹುಟ್ಟಿದಮೇಲೆ ಸಾಯಲೇಬೇಕು, ಸತ್ತವನು ಹುಟ್ಟಲೇಬೇಕು ಆದರೆ ಬದುಕಿರುವಾಗ ಸತ್ಯ, ಧರ್ಮವಂತನಾಗಿರಬೇಕು. ಧರ್ಮಕ್ಕೆ ವಿರುದ್ಧವಾಗಿರಬಾರದು. ಯಾವಾಗಲು ಧರ್ಮಕ್ಕೆ ಜಯ ಎಂಬುದು ವೇದ. ದುರಾಚಾರಗಳು ಕೊನೆಯಾಗಬೇಕು. ಧರ್ಮ ಸ್ಥಾಪನೆಯಾಗಬೇಕು. ಆದ್ದರಿಂದಲೇ ನಾನು ಸಹ ಮತ್ಸ್ಯ ಇತ್ಯಾದಿ ಅವತಾರ ಮಾಡಬೇಕಾಯ್ತು.
ರಾಜ್ಯ ಸಂಪಾದನೆಗಾಗಲಿ ಅಧಿಕಾರವನ್ನು ಗಳಿಸುವುದುಕ್ಕಾಗಲಿ ಯುದ್ಧವಾಗುತ್ತಿಲ್ಲ. ಅಧರ್ಮವು ಸಂಪೂರ್ಣನಾಶವಾಗಿ
ಧರ್ಮವು ವಿಜ್ರುಮ್ಬಿಸಲೇಬೇಕು ಇದೇ ಶ್ರೀಕೃಷ್ಣನ ಮುಖ್ಯೋದ್ಧೇಶವಾಗಿತ್ತು. ಇದನ್ನು ತಿಳಿಸಲು ಗೀತೋಪದೇಶ ಮಾಡಬೇಕಾಯ್ತು  ಇತಿಹಾಸವೇ  ನಿರ್ಮಾಣವಾಯ್ತು.   ಗೀತಾಧ್ಯಯನದಿಂದ ಮನುಷ್ಯನಜನ್ಮವೇ ಸಾರ್ಥಕಗೊಳ್ಳುವುದು ಎಂದಮೇಲೆ ಗೀತೆಯಮಹತ್ವವನ್ನು  ಸಾಮಾನ್ಯನು  ವರ್ಣಿಸಲಾರನಷ್ಟೆ.

Thursday 23 August 2012

Gita- contd.

 In Geethopadesha  three Yogas have been expounded namely-The Path of Action, The Path of Knowledge
and The Path of  Devotion. There is the inalienable relation of the three bodies viz.,The Gross (STHOOLA),
The Subtle (SOOKSHMA), and the Causal(KAARANA) bodies with the World. When employ all these three in the service of human kind and nature -this is the Path of Action; Realization of one's' identity with one's own self  after dissociating from them - this is Path of Knowledge; and surrendering oneself  to God - this is the Path of Devotion.
 In order to accomplish these three yogas  i.e., to realize one's own well-being man is endowed with three powers.
Power to do-------rendering service to the needy in the world- that is Karma Yoga
Power to know----meant for self realization                             - that is   Jnaana yoga
Power to believe-- is to totally surrender to God                      - that is Bhakthi Yoga

All the above three yogas are independant pathways of God Realization.

Saturday 18 August 2012

karma phala mattu adrushta

ಕರ್ಮ ಎಂದಾಗ  ಪ್ರಾರಬ್ಧಕರ್ಮ, ಸಂಚಿತಕರ್ಮ, ಆಗಮಿಕರ್ಮ ಇವು ಗಮನಕ್ಕೆ ಬರುವುದು.   ಹಿಂದೆ ಮಾಡಿದ್ದರ ಫಲ(ಪ್ರಾರಬ್ಧ)  , ಈಗ ಮಾಡುತ್ತಿರುವುದರ ಫಲ ಸಂಚಯವಾಗಿ(ಸಂಚಿತ) ಉಂಟಾಗುವ ಫಲ,  ಮುಂದೆ ಅನುಭವಿಸಬೇಕಾಗಿಬರಬಹುದಾದುದಕ್ಕೆ
 (ಆಗಮಿ) ಕಾರಣವಾಗುವ ಫಲ ಇವುಹುಟ್ಟಿದ ಎಲ್ಲಾ ಜೀವಿಗಳಿಗೂ ಅನ್ವಯ.
        ತಾಪತ್ರಯಗಳನ್ನು  (ಆದಿದೈವಿಕ,ಆದಿಭೌತಿಕ,ಆದ್ಯಾತ್ಮಿಕ)   ನಾವು ಹೇಗೆ ಗಮನಿಸುತ್ತೀವೋ ತಾಪವೆಂದರೆ ಶಾಖ (ಇದಕ್ಕೆ ಸ್ವಾಭಾವಿಕವಾಗಿಯೇ  ಸುಡುವ ಗುಣವಿರುತ್ತದೆ ) ಈ ರೀತಿಯ ಕರ್ಮ,  ಅಥವಾ ತಾಪಗಳನ್ನು ಉಪಶಮನ ಮಾಡುವುದಕ್ಕಾಗಿಯೇ   ಸತ್ಕರ್ಮ ಸಚ್ಹಿಂತನೆ ಸದ್ವಚನ  ಮುಂತಾದುವು ನಮ್ಮ ಮುಂದಿರುತ್ತದೆ. ಇದನ್ನು ಗಮನಮಾಡುವುದಿಲ್ಲವಾದ್ದರಿಂದ  ಸಮಸ್ಯೆಯ ಸುಳಿಯಲ್ಲಿ ಸದಾ ಸಿಕ್ಕಿಕೊಂಡಿರುತ್ತೇವೆ.
    ಭಗವತ್ ಪ್ರಚೋದನೆ ಮೂಲಕ ದೊರಕಿದ ಮಾರ್ಗದರ್ಷನವು ಗುರುವಿನದಾದರೆ  ಅನುಗ್ರಹವು ಮಾತ್ರ ಭಗವಂತನದೇ ಆಗಿರುತ್ತೆ. 
     ಅನುಗ್ರಹವು ಪೂರ್ವಪುಣ್ಯವನ್ನೂ , ಪುರ್ವಪುಣ್ಯವು ಕರ್ಮವನ್ನೂ  ಎಡಬಿಡದೆ ಸಂಕೋಚವಿಲ್ಲದೆ ಅನುಸರಿಸುತ್ತವೆ.
ಕರ್ಮವು ಸವಿಯುವವರೆಗೂ ಶುಭಾಫಲವು ಗೋಚರಿಸುವುದಿಲ್ಲ. ಸತ್ಕರ್ಮಗಳಿಂದ ಕರ್ಮದ ತೀಕ್ಷ್ಣತೆಯನ್ನು ಕಡಿಮೆಮಾಡಿಕೊಳ್ಳಲು ಸಾಧ್ಯವಾಗಬಹುದು ಇಲ್ಲಿ ಪ್ರಾಮಾಣಿಕ ಸತ್ಪ್ರಯತ್ನವಿರಬೇಕು ಅಷ್ಟೆ.
 ಕೆಲವೊಮ್ಮೆ  ಶುಭಫಲ  ಲಭ್ಯವಾದಾಗಲು ಅಥವಾ  ಅಲಭ್ಯವಾದಾಗಲೂ  ಮಾರ್ಗದರ್ಶಕನನ್ನು ಮರೆಯುವವಂತಹ ಮನಸ್ಕರಾಗುತ್ತಾರೆ  ಇದು ಜನ್ಮಾಂತರ ಕರ್ಮ ಫಲ.  ಹೀಗಾಗಿ ಪೂರ್ವಪುಣ್ಯದ,  ಅದೃಷ್ಟದ, ಶ್ರಮದ   ಶುಭಫಲಗಳನ್ನು ಅನುಭವಿಸುವ ಸೌಭಾಗ್ಯವು  ಕೈತಪ್ಪಿಹೊಗುವ ಸಾಧ್ಯತೆ ಇರುತ್ತದೆ.   ಯಾವಾಗಲೂ ಶುಭಫಲವು ಪುರ್ವಪುಣ್ಯವನ್ನೂ,
ಪುರುಷ ಪ್ರಯತ್ನವನ್ನೂ ಹಿಂಬಾಲಿಸುತ್ತದೆ.
ನಿರಂತರ ಸಾಧನೆ,  ಪ್ರಾಮಾಣಿಕಪ್ರಯತ್ನ , ಒಳ್ಳಯದನ್ನೇ ಮಾಡುವ ಹಂಬಲ  ಹಾಗು ಛಲ  ಇರಬೇಕು.  ಆಗ ಪರಿಶ್ರಮದ ಶುಭಫಲವು ನಿಶ್ಚಯವಾಗಿಯೂ ನಿರ್ದಿಷ್ಟಸಮಯದಲ್ಲಿ ಅನುಭವಕ್ಕೆ ಬರುವುದು. ಇದನ್ನು (ಕರ್ಮದ ಫಲವನ್ನು)ಅದೃಷ್ಟವೆಂತಲೂ, ಪುರ್ವಪುಣ್ಯವೆಂತಲೂ  ಭಾವಿಸುತ್ತೇವೆ.  



Friday 17 August 2012

Specific goal of SRIMADBHAGAVADGEETHA

ಶ್ರೀಮತ್  ಭಗವದ್ಗೀತೆಯು ಭಗವಂತನು  ಆದೇಶಿಸಿರುವ ಮನುಷ್ಯನು ತಿಳಿದುಕೊಳ್ಳಲೇಬೇಕಾದ ತಿಳುವಳಿಕೆಯ ಮಹಾಸಾಗರ.
ಶ್ರೀಮತ್  ಭಗವದ್ಗೀತೆಯ ಅತ್ಯಂತ ಆತ್ಮೀಯವಾದ,ಆಪ್ಯಾಯಮಾನವಾದ,ಮನುಷ್ಯನು  ಎಂಥಹ ಸ್ಥಿತಿ ಯಲ್ಲೂ ಅಳವಡಿಸಿಕೊಳ್ಳಲೇ ಬೇಕಾದ ಮುಖ್ಯ ಉದ್ಧೇಶವನ್ನು ಹೊಂದಿದೆ.   ಗೀತೆಯು ಮನುಷ್ಯನ ಕಲ್ಯಾಣಕ್ಕಾಗಿಯೇ ಇದೆ. ಅಂದರೆ ಜೀವನದ ಪರಮೋದ್ಧೇಶವು ಈ ಗೀತೆಯಲ್ಲಿ ಅಡಗಿದೆ. ದೈವ ಸಾಕ್ಷಾತ್ಕಾರ ಪಡೆಯಬೇಕಾದರೆ ಗೀಥಾನುಷ್ಠಾನದ ಆವಶ್ಯಕತೆ ಇದೆ.  ಮನುಷ್ಯನು ಬದುಕಲು ಸಾಧ್ಯವೇ ಇಲ್ಲವೆಂಬುದಕ್ಕೆ ಉದಾಹರಣೆ ಇರುವುದಿಲ್ಲ. ಕಾರಣವೇನೆಂದರೆ ಭಗವಂತನು ಎಲ್ಲೆಡೆ,ಯಾವುದೇ ಸಮಯದಲ್ಲಿಯೂ,ಎಂಥಹುದೆಸ್ಥಿಥಿಯಲ್ಲಿಯೂ ಸಮಾನವಾಗಿ ಪ್ರತ್ಯಕ್ಷವಾಗಿಯೂ ಇರುತ್ತಾನೆ. ಭಗವಂತನ ಕೃಪೆಗೆ ಪಾತ್ರನಾಗಲು ವಸ್ತು ಸ್ಥಿತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಉತ್ತಮ ಸ್ಥಿತಿಯ ಉಪಯೋಗವೆಂದರೆ ಆಸೆಯನ್ನು     ಬಿಡಬೇಕು, ತ್ಯಾಗಮಯಿಯಾಗಬೇಕು, ಯಾವುದೇ ಸ್ಥಿತಿಯಲ್ಲೂ ಸತ್ಯವನ್ನು ಬಿಡಬಾರದು, ಲೌಕಿಕಸುಖದಿಂದ ಹೊರತಾಗಿರಬೇಕು, ಸಂಕಲ್ಪ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು,  ಮತ್ತೊಬ್ಬರ ಸೇವೆಗಾಗಿ ಶ್ರಮಿಸಬೇಕು, ಮನೋನಿಯನ್ತ್ರಣ ವಿರಬೇಕು,ಇಂಥಹ ಸ್ಥಿತಿಯ ಉಪಯೋಗದಿಂದ ದೈವಸಾನಿಧ್ಯವು  ಹತ್ತಿರವಾಗಬಹುದು.
ಸದಾಚಾರಿಯ  ಸದಾಚಾರದಿಂದ ಪಾಪವು  ಕ್ಷಣಕ್ಷಣಕ್ಕೂ ಕ್ಷೀಣಿಸುತ್ತದೆ.
ದುರಾಚಾರಿಯ ದುರಾಚಾರದಿಂದ  ಪುಣ್ಯವು   ಕ್ಷಣಕ್ಷಣಕ್ಕೂ ಕ್ಷೀಣಿಸುತ್ತದೆ.
ಅನಾಚಾರದಿಂದ ಪತಿತತ್ವ, ಸದಾಚಾರದಿಂದ ದೈವತ್ವ  ಪ್ರಾಪ್ತಿಯಾಗುತ್ತದೆ.
ಮತ್ತೊಬ್ಬರ ಅನ್ನವನ್ನು(ದುಡಿಮೆಯನ್ನು ) ಕದಿಯುವುದು, ಪ್ರತಿ ಕ್ಷಣ ಸುಳ್ಳುಹೇಳುವುದು, ದುಡಿಯದೆ ಇರುವುದು, ಅನ್ನಕ್ಕಾಗಿ ಸಾಲಮಾಡುವುದು, ಪ್ರತಿಕ್ಷಣ ಮುಗ್ಧತೆಯ ಶೋಷಣೆ ಮಾಡುವುದು  ಇವುಗಳನ್ನು ಮಾಡುವವರು  ಯಾರೇ ಆಗಲಿ ಪಡಬಾರದ ಕಷ್ಟವನ್ನು ,   ಹೊಂದಲಾರದನಷ್ಟವನ್ನು ಅನುಭವಿಸುತ್ತಾರೆ. ಕೆಟ್ಟದಕ್ಕೆ ನೂರೆಂಟು ಬಾಗಿಲು, ಒಳ್ಳಯದಕ್ಕೆ ಒಂದೇ ಬಾಗಿಲು.
ಗೀತೆಯ ಶ್ರವನಕ್ಕಿಂತ ಮನನ; ಮನನಕ್ಕಿಂತ ಧ್ಯಾನ ;ಧ್ಯಾನಕ್ಕಿಂತ ನಿರ್ವಿಕಲ್ಪ ಒಂದಕ್ಕಿಂತ ಒಂದು ಉತ್ಕೃಷ್ಟ ಚೇತನವುಳ್ಳದ್ದು.

Srimadbhagavadgeetha - A greatway to achieve God Realisation

ಈ ಬ್ರಹ್ಮಾಂಡವನ್ನು ಗಿಡ,ಮರ ಹಾಗು ಎಲ್ಲ ಜೀವಿಗಳಿಗೆ ಬೇಕಾಗುವ ಸೌಕರ್ಯವನ್ನು,ವೋದಗಿಸಿಯೇ ,ಅನುಕೂಲತೆಯನ್ನು ಮಾಡತ್ತಲೇ ಭಗವಂತನು ಸೃಷ್ಟಿಸಿದ್ದಾನೆ. ಇದರಿಂದ  ಮನುಷ್ಯನು ಹೊರತಾಗಿಲ್ಲ,
ಆದರೆ ಮನುಷ್ಯನ ಸ್ವಾರ್ಥ, ಕ್ರೌರ್ಯ,ವ್ಯಾಮೋಹಾದಿಗಳಿಂದ ಕೂಡಿ ಎಲ್ಲವನ್ನು ಹೊಂದಿದ್ದೇನೆಂಬ  ದುರಹಂಕಾರದಿಂದ 
ಪಾಪದ ಕೂಪದಲ್ಲಿ ರುತ್ತಾನೆ. ಇದನ್ನು ಬಿಟ್ಟರೆ  ಭಗವಂತನ ಅನುಗ್ರಹವಾಗುವುದು.
Negative attitude has made man an 'Atheist'. All living beings accept man works on single sense of organ,
unfortunately or fortunately man has five senses and hence the tragedy.An Atheist always says that god is
NO WHERE , a Pious Mans' says God is NOW HERE.
Realization of God is not that easy, .......ಧ್ಯಾನಾವಸ್ಥಿತ  ತದ್ಗತೇನ ಮನಸಾ ಪಷ್ಯನ್ತಿ ಯಮ್  ಯೋಗಿನೋ ....
ಸದಾಕಾಲವೂ ಭಗವಂತನ ದ್ಯಾನದಲ್ಲಿಯೇ ಮಗ್ನನಾಗೀರುವ ಯೋಗಿಗಳಿಗೆ ಮಾತ್ರವೇ ಗೋಚರಿಸುತ್ತಾನಾದ್ದರಿಂದ
ಸಾಮಾನ್ಯನಿಗೆ ಸಾಕ್ಷಾತ್ಕಾರವು ದುರ್ಲಭ.  EVEN AT THE END OF THE FINER EMOTIONS OF A PIOUS MAN IS ALSO NOT SOON OBTAINED, HOW CAN THEN LIMIT  OR END OF THE EMOTIONS ENCASED AND TREASURED IN THE WORDS OF GOD WHOSE FORMS AND ARE INFINITE BE EVER REACHED?  ......contd
 

Thursday 19 July 2012

ಅದ್ವೈತ ಸಿದ್ಧಾಂತ

                                                                 ' ಅದ್ವೈತ ಸಿದ್ಧಾಂತ '
ಅದ್ವೈತ ವೆಂದರೆ   ದ್ವೈತ ಭಾವವಲ್ಲದ್ದು  , ಎರಡು ಎಂಬ ಅರ್ಥ ಇಲ್ಲದ್ದು.  ಏಕಮೇವ ನ  ದ್ವಿತೀಯಂ  ಎಂದಾಗ ಸ್ಪಷ್ಟ .
ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂಬುದೇ  ಅದ್ವೈತ ಧರ್ಮದ ಪರಮ ಸಿದ್ಧಾಂತ.  ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಆದಿಗುರು ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ಭಗವತ್ಪಾದರು   ನಾಲ್ಕು ಮಹಾ ವಾಕ್ಯ ಗಳೊಂದಿಗೆ ಸಮರ್ಥಿಸಿ ಸನಾತನಧರ್ಮವನ್ನು ಪತಿಷ್ಟಾಪಿಸಿ ಲೋಕೋದ್ಧಾರ  ಮಾಡಿರುತ್ತಾರೆ. ಆ  ಮಹಾವಕ್ಯಗಳು ಕೆಳಕಂಡಂತಿವ.

ಪ್ರಜ್ಞಾನಂ ಬ್ರಹ್ಮ   :- ಋಗ್ವೇದ ಹಿನ್ನೆಲೆ,  ಜ್ಞಾನದ ಬೆಳಕೇ ಪರಬ್ರಹ್ಮ ಎಂಬ ಅನುಭವ ವಾಕ್ಯ.
                              ('BRAHMAN' IS PURE CONSCIOUSNESS)
                              ಬಂಗಾಳ ಸಮುದ್ರ ತೀರ -ಪುರಿ (ಜಗನ್ನಾಥ), ಗೋವರ್ಧನ ಪೀಠ
                              ಶಕ್ತಿ  ದೇವತೆ -ವಿಮಲಾ   

ಅಹಂ ಬ್ರಹ್ಮಾಸ್ಮಿ :-  ಯಜುರ್ವೇದ, ನಾನೇ  ಬ್ರಹ್ಮ , ನಿಧಿಧ್ಯಾಸನ ವಾಕ್ಯ
                              (I AM  'BRAHMAN')
                              ತುಂಗಾ ನದಿ ತೀರ -  ಶೃಂಗಗಿರಿ  (ಶೃಂಗೇರಿ), ಶ್ರೀ ಶಾರದ ಪೀಠ (ಆದಿವರಾಹ)
                              ಶಕ್ತಿ ದೇವತೆ -ಶಾರದಾ 

ತತ್ವಮಸಿ ( ತತ್ ತ್ವಂ ಅಸಿ)  :-  ಸಾಮವೇದ ,ನೀನೆ ಪರಬ್ರಹ್ಮ (ಅದು ನೀನೇ ಆಗಿದ್ದೀಯೇ)  ಶ್ರವಣ ವಾಕ್ಯ
                                              (THOU ART THAT )  
                                              ಗೋಮತಿ ನದಿ ತೀರ , ದ್ವಾರಕಾ ನಗರ ,ಕಾಳಿಕಾ ಪೀಠ - ಸಿದ್ಧೆಶ್ವರ
                                             ಶಕ್ತಿ ದೇವತೆ - ಭದ್ರಕಾಳಿ.


ಅಯಮಾತ್ಮಾ ಬ್ರಹ್ಮ  :- ಅಥರ್ವವೇದ ,  ಆತ್ಮವೇ ಬ್ರಹ್ಮ ,  ಮನನ ವಾಕ್ಯ
                                    THIS AATMAN IS BRAHMA
                                    ಅಲಕನಂದಾ ನದಿ, ಬದರೀನಾಥ , ಜ್ಯೋಥಿರ್ಮಠ,(ನಾರಾಯಣಪೀಠ ) ಪೂರ್ಣಗಿರಿ