Thursday, 2 January 2014

   ಪಾಪ-ಪುಣ್ಯ,ಪುನರ್ಜನ್ಮ

ಹಿಂದಿನಜನ್ಮದಲ್ಲಿ ಮಾಡಿದ ಪಾಪ-ಪುಣ್ಯದ ಫಲವಾಗಿ ಜೀವಿಯು ಜನ್ಮತಾಳುತ್ತದೆ .ವಿಷೇಶವಾಗಿ ಮನುಷ್ಯನಿಗೆ ಇದು ಅನ್ವಯಿಸುತ್ತದೆ. ಶುಭಾಶುಭ ಫಲವನ್ನು ಅನುಭವಿಸುವುದಕ್ಕಾಗಿ ಭೂಮಿಗೆ ಬರಬೇಕುತ್ತದೆ. ಒಳ್ಳೆಯದನ್ನು ಮಾಡುವುದರಿಂದ ಪುಣ್ಯವೂ, ಕೆಟ್ಟದ್ದನ್ನು ಮಾಡುವುದರಿಂದ ಪಾಪವು ಬರುವುದು. ಸುಖ-ದುಃಖ ಗಳು ಕ್ರಮವಾಗಿ  ಪುಣ್ಯ-ಪಾಪ ಗಳಿಂದ ಬರುವುದು, ಇವುಗಳನ್ನು ಸ್ವರ್ಗ-ನರಕ ಎಂದು ಪರಿಗಣಿಸಿಕೊಂಡರೆ,ಸುಖದಸವಲತ್ತು-ಸೌಕರ್ಯಗಳು ಸ್ವರ್ಗದಲ್ಲಿ ಮಾತ್ರವೇ. ಅಲ್ಲಿ ಯಾವಕೊರತೆಯೂ ಇರುವುದಿಲ್ಲ, ಅಲ್ಲಿಗೆ ಹೊಗುವವರೆಲ್ಲರೂ ಅವರವರ ಪಾಲಿನಫಲವನ್ನು ಅವರವರೇ ಸವಿಯುತ್ತಾರೆ,ಬೇರೆಯವರ ಪಾಲನ್ನು ನೋಡುವುದಿಲ್ಲ, ಕೇಳುವುದಿಲ್ಲ,ಕದಿಯುವುದಿಲ್ಲ. ಈ ವ್ಯಾಪಾರವು ಮನುಷ್ಯನಲ್ಲಿಮಾತ್ರ. ಅಲ್ಲಿ ಹಸಿವುಬಯಾರಿಕೆಗಳು ಕೂಡ ಇರುವುದಿಲ್ಲ. ತಾನು ಮಾಡಿರಬಹುದಾದ ಎಲ್ಲ ಕಾರ್ಯಗಳ  ಪುಣ್ಯದ ಫಲವು  ಸ್ವರ್ಗದಲ್ಲಿ ಅದಾಗಲೇ ಬುಟ್ಟಿಯಂತೆ ಆ ಮೊದಲೇ ತಲಪಿರುತ್ತದೆ. ಅನುಭವಿಸಿದ ಪುಣ್ಯದ ಫಲವು ತೀರಿದ ಮೇಲೆ ಮತ್ತೆ ಕರ್ಮಫಲವನ್ನುಸ(ಶುಭ \ ಅಶುಭ) ಅನುಭವಿಸಲು ಭೂಮಿಗೆ ಬರುವುದು ಅನಿವಾರ್ಯ ತಪ್ಪಿಸುಕೊಳ್ಳುವಂತಿಲ್ಲ. ಸ್ವರ್ಗದಲ್ಲಿ ರೋಗವಿರುವುದಿಲ್ಲ ,ಮುಪ್ಪಿರುವುದಿಲ್ಲ, ಸಾವಿರುವುದಿಲ್ಲ ಪುಣ್ಯ ತೀರುವತನಕ ಅಲ್ಲಿದ್ದು ಭೂಲೊಕಕ್ಕೆ ಬರಲೇ ಬೇಕು. ಬರುವ ರೀತಿ ಮಾತ್ರ ಪ್ರಕೃತಿ ನಿಯಮದಂತೆ ಇರುತ್ತದೆಋತುಮಾನವನ್ನನುಸರಿಸಿ ಮಳೆಯಾಗುವುದು.ಭೂಮಿಗೆ ಮಳೆಯಾಗುವ ಸಂದರ್ಭದಲ್ಲಿ  ಪುಣ್ಯ ತೀರಿದವರೆಲ್ಲರೂ ಮಳೆ ಹನಿಯೊಡನೆ ಭೂಮಿಗೆ ಬಿದ್ದು ಸಸ್ಯಗಳೊಡನೆ ಸೇರಿ ಅದನ್ನು ತಿನ್ನುವ ಮನುಷ್ಯನೋ/ಪ್ರಾಣಿಯೋ ಅವುಗಳ ಮೂಲಕ ತಮಾ ತಮ್ಮ ಸಂಸ್ಕಾರಕ್ಕೆ ತಕ್ಕಂತೆ ಜನ್ಮ ತಳೆಯುವರು(ಪಾಪ-ಮಾಡಿರುವ ಕೆಟ್ಟ ಕಾರ್ಯಗಳು,  ಪುಣ್ಯ- ..ಒಳ್ಳೆಯ ಕಾರ್ಯಗಳು, ಪುನರ್ಜನ್ಮ- ಸಂಸ್ಕಾರಗಳಿಗೆ ತಕ್ಕಂತೆ ). ತಾನು ಏನಾಗಿ ಹುಟ್ಟುವೆನು ಎಂಬುದು ಜನ್ಮಿಸುವವನ ನಿಯಂತ್ರಣದಲ್ಲಿರುವುದಿಲ್ಲ, ವಿಧಿಯು, ಪ್ರಕೃತಿಯು (ಅವನು) ಕಲಿಸಿದಕಡೆಗಷ್ಟೇಹೋಗುವುದು ಜೀವಿಯ ಕೆಲಸ  
ಸ್ವರ್ಗದಲ್ಲಿರುವಾಗ ಹೊಸದಾಗಿ ಮತ್ತೆ ಮತ್ತೆ ಪುಣ್ಯಕಾರ್ಯಗಳನ್ನು ಮಾಡಿ ಅಲ್ಲೇ ಇರುವುದಕ್ಕಾಗುವುದಿಲ್ಲ. ಆ ಭೋಗ ಭೂಮಿಯಲ್ಲಿ ಪುಣ್ಯ ಗತಿಸಿದ ಮೇಲೆಮರ್ತ್ಯ ಲೋಕಕ್ಕೆ ಬರಲೇಬೇಕು ಇದು ಪ್ರಕೃತಿ ನಿಯಮ(ವೃತ್ತಿಯಿಂದ  ನಿವೃತ್ತಿ ಹೊಂದುವ ರೀತಿ)ಸಂಕಲ್ಪ ಶಕ್ತಿಯ ಪ್ರಭಾವವೆಲ್ಲವೂ ಭೂಮಿಯಲ್ಲಿ ಮಾತ್ರ. ಭೂಲೋಕದಲ್ಲಿ ಮೃತ್ಯು ಭಯವಿದೆ,ಆದರೆ ಮೃತ್ಯುವು ಎಲ್ಲರಿಗೂ ಇದೆ ಅನ್ನುವುದು ಎಲ್ಲರಿಗೂ ಗೊತ್ತಿದ್ದರೂ ಮನುಷ್ಯನು ಮಾತ್ರ ಇಲ್ಲದ ಅಪಚಾರಗಳನ್ನೇ ಮಾಡುತ್ತಿರುತ್ತಾನೆ. ಮನುಷ್ಯನು ಸತ್ತಮೇಲೆ ದುಃಖ ಪಡುವವರು ಇರುವರು ಸತ್ತವನು ಈ ದೃಶ್ಯವನ್ನು ನೋಡಲಾರನಷ್ಟೇ. ಆದರೆ ಮತ್ತೊಂದು ಮೃತ್ಯು ಸದ್ರುಶವಾದುದು 'ರೋಗ'ಎಂಬುದಿದೆ, ಮನುಷ್ಯನು,  ರೋಗವನ್ನು ಮ್ರುತ್ಯುಯೋಪಾದಿಯಲ್ಲಿ ನೋಡುತ್ತಿರುತ್ತಾನೆ, ರೋಗವು 'ಮ್ರುತ್ಯುಸ್ವರೂಪಿ' ಎಂಬುದುದು ಅವನಿಗೆ ಗೊತ್ತಿದೆ. ಆದ್ದರಿಂದಲೇ ಅವನಿಗೆ ವಿಪರೀತ ಭಯ. ಎಲ್ಲಿ ಯಾವಾಗ ಸಾಯುವೆನೋ ಎಂಬುದೇ ಅವನನ್ನು ಇದ್ದೂ ಸತ್ತಂತೆ ಮಾಡುವ ಮಹಾರೋಗ. ವಿವೇಕಾನಂದರು ಹೇಳುತ್ತಾರೆ -ಧೈರ್ಯ ಎಂಬುದೇ ಬದುಕು ಭಯವೆಂಬುದೆ ಮೃತ್ಯು. 
ಪಾಪಕರ್ಮಗಳಿಂದ ದೂರವಿರಬೇಕು, ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಬೇಕು. ಪುಣ್ಯ  ಕಾರ್ಯಗಳಿಂದ  ಸ್ವರ್ಗದಲ್ಲಿ  ಸ್ಥಾನವಿದೆ. ಪಾಪಕಾರ್ಯದಿಂದ ಇಹದಲ್ಲು ಕಷ್ಟ, ಪರದಲ್ಲಿಯೂ ಕಷ್ಟ. 'ಪರೋಪಕಾರಾಯ ಪುಣ್ಯಾಯ, ಪಾಪಾಯ ಪರ ಪೀಡನಾಯ' ಎಂಬುದು ಪ್ರಸಿದ್ಧ ವಾಕ್ಯ                                                

-- 
ಕುಮಾರಸ್ವಾಮಿ ಕೆ. ಆರ್ 
ವೈಜ್ಞಾನಿಕ ಜ್ಯೋತಿಷಿ 
ಶ್ರೀ ಸ್ವಾತಿ ಗಣಪತಿ ಜ್ಯೋತಿಷ್ಯ ಸಂಶೋಧನಾ ಕೇಂದ್ರ 
ಪದ್ಮನಾಭನಗರ, ಬೆಂಗಳೂರು ಕಿಡ್ನಿ ಫೌಂಡೆಶನ್ ಹಿಂಬಾಗ 
ಬೆಂಗಳೂರು 

Sunday, 7 April 2013

ತಂದೆ-ತಾಯಿ ಇವರು ಸ್ವಭಾವದಿಂದಲೇ ಹಿತೈಷಿಗಳು, ಇವರನ್ನು ವಂಚಿಸಿವ, ತಿರಸ್ಕರಿಸುವ, ದ್ವೇಷಿಸುವ ಮಕ್ಕಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾರನ್ನು ಬೇಕಾದರೂ ಬಲಿಕೊಡುತ್ತಾರೆ. ತಂದೆ-ತಾಯಿಯರನ್ನು ಬೇರ್ಪಡಿಸಿ ಆನಂದಿಸುತ್ತಾರೆ. ತಾವೂ ನಾಶಹೊಂದಿ  ಕುಟುಂಬವನ್ನು ಹಾಳುಗೆಡುಹುತ್ತಾರೆ. ಅವರು ಪಶ್ಚಾತ್ತಾಪ ಪಡುವುದಿಲ್ಲ.. ಕಳ್ಳರ
ದರೋಡೆಕೋರರ ಕೊಲೆಗಡುಕರಿಂದಾದ ಆಘಾತವು ಹೆಚ್ಹೆನಿಸುವುದಿಲ್ಲ. ಮಕ್ಕಳೇ ಹಾಗಾದಾಗ ದುಃಖಾಂತ ಜೀವನವಾಗಿ  ತಂದೆತಾಯಿಯರ ಸಾವಿಗೆ ಕಾರಣರಾಗುತ್ತಾರೆ,ಅಷ್ಟೇ ಅಲ್ಲ ಆ ಮಕ್ಕಳು ಮಹಾ ಪಾಪಿಗಳಾಗಿ ಉಳಿಯುತ್ತಾರೆ.

Tuesday, 2 April 2013

               ದೈವ ಶಕ್ತಿ (ಅದೃಷ್ಟ) ಮತ್ತು ಪುರುಷ ಪ್ರಯತ್ನ    

     ಯಾವ  ಕೆಲಸವೆ ಆಗಲಿ ಅದೃದೃಷ್ಟದಿಂದಲೂ ಪುರುಶಪ್ರಯತ್ನದಿಂದಲೂ ಲಭಿಸುತ್ತದೆ. ಪೂರ್ವಜನ್ಮದಿಂದ ಅರ್ಜಿತವಾದ ಪುರುಷ ಶಕ್ತಿಯೇ ದೈವವೆಂದೂ ಅದೃಷ್ಟವೆಂದೂ ಹೇಳಲ್ಪಡುತ್ತದೆ. ಅದೃಷ್ಟ ಹಾಗು ಕರ್ಮ ಫಲಗಳು ಯಾವಾಗಲೂ  ಇರುವ ತತ್ವಗಳೇ ಆಗಿವೆ. ಇವೆರಡು ಸೇರದೇ ಯಾವ ಕೆಲಸವೂ ಆಗುವುದಿಲ್ಲ. ಪುರುಷ ಪ್ರಯತ್ನವನ್ನು- Free ವಿಲ್ ಎಂದೂ, ದೈವ ವನ್ನು- Destiny(ಪ್ರಾರಬ್ಧ ಕರ್ಮ ಅ-ದೃಷ್ಟ )  ಎಂದೂ,
ಪ್ರಾರಬ್ಧವು ಪೂರ್ವ ಜನ್ಮದ ಕರ್ಮದ ಫಲವೆಂದೂ,ಎದು ದೇಹಕ್ಕೆ ಸಂಬಂಧಪಟ್ಟಿದ್ದು ಎಂದೂ ಹೇಳುತ್ತಾರೆ. 
      ಮನುಷ್ಯನಿಗೆ ಆತ್ಮಜ್ನಾನವು  ಪುರುಷ ಶಕ್ತಿ-ದೈವಶಕ್ತಿ ಗಳೆರಡನ್ನೂ ಮೀರಿದೆ. ಸುಖ-ದುಃಖ,ಇಷ್ಟ-ಅನಿಷ್ಟ ಏರು-ಪೇರುಗಳು  ಪೂರ್ವಜನ್ಮದ ಕರ್ಮದ ಫಲವಾಗಿ ಈಶ್ವರೇಚ್ಹಾನುಸಾರವಾಗಿ ನಡೆಯುತ್ತದೆ. ಇವುಗಳು ನಡೆಯಲು ಫಲಿಸಲು ಕೆಲವೊಂದು ಪೂರಕಗಳ, ಕಾರಕಗಳ (ಅಪೇಕ್ಷತೆ) ಅವಶ್ಯಕತೆ ಇರುತ್ತದೆ. ದೇವರು,ಕಾಲ,ಕರ್ಮ,ಮಂತ್ರ,ತಂತ್ರ,ಯಂತ್ರ ಔಷಧಿ,ಜಪ,ತಪ,ದ್ರವ್ಯಾದಿಗಳ ಸ್ವಭಾವಇತ್ಯಾದಿಗಳು ಆ ಕಾರಕಗಳು. ಇದರ ಭವಿಷ್ಯನುಡಿಯಲು ಹಲವು ಸಲಕರಣೆಗಳು ಬೇಕಾಗುತ್ತದೆ. ವ್ಯಕ್ತಿಯ ಜಾತಕವು ಪ್ರಧಾನವಾಗಿ ಬೇಕಾಗುತ್ತದೆ. 
ಎರಡು ಟಗರುಗಳಂತೆ ದೈವ ಹಾಗು ಪುರುಷ ಪ್ರಯತ್ನಗಳು ಹೋರಾಡುತ್ತವೆ. ಯಾವುದು ಬಲವಂತವಾಗಿರುತ್ತದೋ ಅದು ಒಂದೇ ಕ್ಷಣದಲ್ಲಿ ಗೆಲ್ಲುವುದು. ಗೆಲುವು ಸೋಲು ಕರ್ಮದ ಫಲವೇ ಆಗಿರುತ್ತದೆ. 
      ಧರ್ಮ,ಕರ್ಮ, ನಂಬಿಕೆ,ವಿಶ್ವಾಸ,ಶ್ರದ್ಧೆ,ಭಕ್ತಿ,ಪ್ರಾಮಾಣಿಕತೆ,ಸತ್ಯ ವಚನ,ನಿಷ್ಠೆ,ವಿಧೇಯತನ ಮುಂತಾದುವುಗಳು ಪ್ರತಿಕ್ರಿಯಿಸುತ್ತವೆ. ಇವುಗಳಿಗೆ ವಿರುದ್ಧವಾದುದೆಲ್ಲವೂ ಅದೃಷ್ಟವನ್ನು ಕ್ಷೀಣಿಸುವಂತೆ ಮಾಡುತ್ತವೆ. ಸದಾಚಾರದಿಂದ ಪಾಪವೂ,ದುರಾಚಾರದಿಂದ ಪುಣ್ಯವೂ ಕ್ಷೀಣಿಸುವುದು. ಮ್ರುಗರಾಜನಾದ ಸಿಂಹವೂ ಸ್ವತಃ ಬೇಟೆಯಾಡಿ ಜೀವಿಸುತ್ತದೆ, ನಾಯಿಯೂ ಕೂಡ ಹತ್ತರುಬೀದಿ ಸುತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ,ಅದೃಷ್ಟವನ್ನು ಕಾಯುವುದಿಲ್ಲವಷ್ಟೇ!
       ಕಾಮಧೇನುವಿಗಾಗಿ ಕೌಶಿಕ ರಾಜನು(ಮುಂದೆ ವಿಶ್ವಾಮಿತ್ರ)  ಬ್ರಹ್ಮರ್ಷಿ ವಸಿಷ್ಟರೊಡನೆ ಸೊತುಸೊರಗಿ ವಸಿಷ್ಟರ ಅಣತಿಯಂತೆ ತಪಸ್ಸಿಗೆ ತೆರಳಿ ಬ್ರಹ್ಮರ್ಷಿ ಪಟ್ಟಕ್ಕೇರುತ್ತಾನೆ. ,ಇಲ್ಲಿ ಅದೃಷ್ಟವು ಕೆಲಸ ಮಾಡಿಲ್ಲ, ಅತಿಯಾದ ಪ್ರಯತ್ನ,ನಿಷ್ಠೆ, ತಪಸ್ಸು,ಧ್ಯಾನ ಇವುಗಳನ್ನು ಸಾಧಿಸಿ ಗೆಲ್ಲುವನು.  ಅದೃಷ್ಟಕ್ಕೆ ಪುರುಷ ಪ್ರಯತ್ನವೆ ಬುನಾದಿ.        (ಮುಂದುವರಿಯುವುದು)                            


Monday, 25 March 2013

ದುಷ್ಟರ ಸಹವಾಸ ಯಾವಾಗಲೂ ಕತ್ತಿಯ ಅಲಗಿನ ಮೇಲೆನಡೆಯುವಂತೆ, ತೊಂದರೆಯ  ಸುಳಿಯಲ್ಲೆ ಸಿಕ್ಕಿಕೊಂಡಿರುತ್ತೇವೆ.
ಹೆಜ್ಜೆ ಹೆಜ್ಜೆಗೂ ಕಾಡುತ್ತದೆ. ನಾಶ,ಮಾನಹಾನಿ ಕಟ್ಟಿಟ್ಟಬುತ್ತಿ. ದುಷ್ಟರ ಸ್ನೇಹ ಸೂರ್ಯನ ಬೆಳಗಿನ ಕಿರಣದಲ್ಲಿ ಉಂಟಾಗುವ ಉದ್ದದ ನೆರಳಿನಂತೆ  ಮೊದಲು ಹೆಚ್ಚುತ್ತಾ ಮಧ್ಯಾನ್ನ್ಹದ ವೇಳೆಗೆ ಕಡಿಮೆಯಾಗುತ್ತದೆ.  ಕಬ್ಬಿನಜಲ್ಲೆಯು ಬುಡದಿಂದ ಮೇಲಿನವರೆಗೆ ಸಿಹಿ ಅಂಶ ಕಡಿಮೆಯಾಗುತ್ತಾ ಹೋಗುತ್ತದೆ, ಅದರಂತೆ ದುಷ್ಟರ ಸ್ನೇಹ. ವ್ಯಕ್ತಿಯ ಹತ್ತಿರ ಧನಬಲವಿರುವವರೆಗೆ
ಅನುಕರಣೆ, ಅನುಸರಣೆ.  ಜೇಬು ಕಾಲಿಯೆಂದಾದರೆ   ದುಷ್ಟನು ಸುಮ್ಮನೆ ಬಿಟ್ಟಹೋಗುವುದಿಲ್ಲ ತೊಂದರೆಕೊಟ್ಟೆ ಹೋಗುತ್ತಾನೆ.
ದುಷ್ಟರ ಸಹವಾಸವು  ತನ್ನನ್ನು ಮತ್ತು  ತನ್ನ ಇಡೀ ಕುಟುಂಬವನ್ನು ಬಲಿತೆಗೆದುಕೊಳ್ಳುವುದೆಂಬುದು ಗಮನಕ್ಕೆ ಬರುವುದಿಲ್ಲ. ಇಂಥಹವರು ಯಾರೇ ಆದರೂ ದೂರವಿರುವುದು ಕ್ಷೇಮ. ದುಷ್ಟ ಪ್ರಾಣಿ,ಹಾವು,ಚೇಳು ಈ ಜಂತುಗಳಿಗೆ ತೊಂದರೆಕೊಟ್ಟೆ ಎಂಬ ಅರಿವಿರುವುದಿಲ್ಲವಷ್ಟೇ!!   ಅದರಂತಯೇ ದುಷ್ಟನೂ ಕೂಡ.  ದುಷ್ಟ ಸಹವಾಸದಿಂದ  ದೂರವಿರಬೇಕು ದುಷ್ಟರನ್ನು ದೂರವಿಡಬೇಕು.   ನಾವು ದುಷ್ಟರೊಡನೆ  ಗುರ್ತಿಸಿಕೂಳ್ಳಬಾರದು.   ಅದು ಎಂದೆಂದಿಗೂ ಅಪಾಯಕಾರಿ.