Thursday 2 January 2014

   ಪಾಪ-ಪುಣ್ಯ,ಪುನರ್ಜನ್ಮ

ಹಿಂದಿನಜನ್ಮದಲ್ಲಿ ಮಾಡಿದ ಪಾಪ-ಪುಣ್ಯದ ಫಲವಾಗಿ ಜೀವಿಯು ಜನ್ಮತಾಳುತ್ತದೆ .ವಿಷೇಶವಾಗಿ ಮನುಷ್ಯನಿಗೆ ಇದು ಅನ್ವಯಿಸುತ್ತದೆ. ಶುಭಾಶುಭ ಫಲವನ್ನು ಅನುಭವಿಸುವುದಕ್ಕಾಗಿ ಭೂಮಿಗೆ ಬರಬೇಕುತ್ತದೆ. ಒಳ್ಳೆಯದನ್ನು ಮಾಡುವುದರಿಂದ ಪುಣ್ಯವೂ, ಕೆಟ್ಟದ್ದನ್ನು ಮಾಡುವುದರಿಂದ ಪಾಪವು ಬರುವುದು. ಸುಖ-ದುಃಖ ಗಳು ಕ್ರಮವಾಗಿ  ಪುಣ್ಯ-ಪಾಪ ಗಳಿಂದ ಬರುವುದು, ಇವುಗಳನ್ನು ಸ್ವರ್ಗ-ನರಕ ಎಂದು ಪರಿಗಣಿಸಿಕೊಂಡರೆ,ಸುಖದಸವಲತ್ತು-ಸೌಕರ್ಯಗಳು ಸ್ವರ್ಗದಲ್ಲಿ ಮಾತ್ರವೇ. ಅಲ್ಲಿ ಯಾವಕೊರತೆಯೂ ಇರುವುದಿಲ್ಲ, ಅಲ್ಲಿಗೆ ಹೊಗುವವರೆಲ್ಲರೂ ಅವರವರ ಪಾಲಿನಫಲವನ್ನು ಅವರವರೇ ಸವಿಯುತ್ತಾರೆ,ಬೇರೆಯವರ ಪಾಲನ್ನು ನೋಡುವುದಿಲ್ಲ, ಕೇಳುವುದಿಲ್ಲ,ಕದಿಯುವುದಿಲ್ಲ. ಈ ವ್ಯಾಪಾರವು ಮನುಷ್ಯನಲ್ಲಿಮಾತ್ರ. ಅಲ್ಲಿ ಹಸಿವುಬಯಾರಿಕೆಗಳು ಕೂಡ ಇರುವುದಿಲ್ಲ. ತಾನು ಮಾಡಿರಬಹುದಾದ ಎಲ್ಲ ಕಾರ್ಯಗಳ  ಪುಣ್ಯದ ಫಲವು  ಸ್ವರ್ಗದಲ್ಲಿ ಅದಾಗಲೇ ಬುಟ್ಟಿಯಂತೆ ಆ ಮೊದಲೇ ತಲಪಿರುತ್ತದೆ. ಅನುಭವಿಸಿದ ಪುಣ್ಯದ ಫಲವು ತೀರಿದ ಮೇಲೆ ಮತ್ತೆ ಕರ್ಮಫಲವನ್ನುಸ(ಶುಭ \ ಅಶುಭ) ಅನುಭವಿಸಲು ಭೂಮಿಗೆ ಬರುವುದು ಅನಿವಾರ್ಯ ತಪ್ಪಿಸುಕೊಳ್ಳುವಂತಿಲ್ಲ. ಸ್ವರ್ಗದಲ್ಲಿ ರೋಗವಿರುವುದಿಲ್ಲ ,ಮುಪ್ಪಿರುವುದಿಲ್ಲ, ಸಾವಿರುವುದಿಲ್ಲ ಪುಣ್ಯ ತೀರುವತನಕ ಅಲ್ಲಿದ್ದು ಭೂಲೊಕಕ್ಕೆ ಬರಲೇ ಬೇಕು. ಬರುವ ರೀತಿ ಮಾತ್ರ ಪ್ರಕೃತಿ ನಿಯಮದಂತೆ ಇರುತ್ತದೆಋತುಮಾನವನ್ನನುಸರಿಸಿ ಮಳೆಯಾಗುವುದು.ಭೂಮಿಗೆ ಮಳೆಯಾಗುವ ಸಂದರ್ಭದಲ್ಲಿ  ಪುಣ್ಯ ತೀರಿದವರೆಲ್ಲರೂ ಮಳೆ ಹನಿಯೊಡನೆ ಭೂಮಿಗೆ ಬಿದ್ದು ಸಸ್ಯಗಳೊಡನೆ ಸೇರಿ ಅದನ್ನು ತಿನ್ನುವ ಮನುಷ್ಯನೋ/ಪ್ರಾಣಿಯೋ ಅವುಗಳ ಮೂಲಕ ತಮಾ ತಮ್ಮ ಸಂಸ್ಕಾರಕ್ಕೆ ತಕ್ಕಂತೆ ಜನ್ಮ ತಳೆಯುವರು(ಪಾಪ-ಮಾಡಿರುವ ಕೆಟ್ಟ ಕಾರ್ಯಗಳು,  ಪುಣ್ಯ- ..ಒಳ್ಳೆಯ ಕಾರ್ಯಗಳು, ಪುನರ್ಜನ್ಮ- ಸಂಸ್ಕಾರಗಳಿಗೆ ತಕ್ಕಂತೆ ). ತಾನು ಏನಾಗಿ ಹುಟ್ಟುವೆನು ಎಂಬುದು ಜನ್ಮಿಸುವವನ ನಿಯಂತ್ರಣದಲ್ಲಿರುವುದಿಲ್ಲ, ವಿಧಿಯು, ಪ್ರಕೃತಿಯು (ಅವನು) ಕಲಿಸಿದಕಡೆಗಷ್ಟೇಹೋಗುವುದು ಜೀವಿಯ ಕೆಲಸ  
ಸ್ವರ್ಗದಲ್ಲಿರುವಾಗ ಹೊಸದಾಗಿ ಮತ್ತೆ ಮತ್ತೆ ಪುಣ್ಯಕಾರ್ಯಗಳನ್ನು ಮಾಡಿ ಅಲ್ಲೇ ಇರುವುದಕ್ಕಾಗುವುದಿಲ್ಲ. ಆ ಭೋಗ ಭೂಮಿಯಲ್ಲಿ ಪುಣ್ಯ ಗತಿಸಿದ ಮೇಲೆಮರ್ತ್ಯ ಲೋಕಕ್ಕೆ ಬರಲೇಬೇಕು ಇದು ಪ್ರಕೃತಿ ನಿಯಮ(ವೃತ್ತಿಯಿಂದ  ನಿವೃತ್ತಿ ಹೊಂದುವ ರೀತಿ)ಸಂಕಲ್ಪ ಶಕ್ತಿಯ ಪ್ರಭಾವವೆಲ್ಲವೂ ಭೂಮಿಯಲ್ಲಿ ಮಾತ್ರ. ಭೂಲೋಕದಲ್ಲಿ ಮೃತ್ಯು ಭಯವಿದೆ,ಆದರೆ ಮೃತ್ಯುವು ಎಲ್ಲರಿಗೂ ಇದೆ ಅನ್ನುವುದು ಎಲ್ಲರಿಗೂ ಗೊತ್ತಿದ್ದರೂ ಮನುಷ್ಯನು ಮಾತ್ರ ಇಲ್ಲದ ಅಪಚಾರಗಳನ್ನೇ ಮಾಡುತ್ತಿರುತ್ತಾನೆ. ಮನುಷ್ಯನು ಸತ್ತಮೇಲೆ ದುಃಖ ಪಡುವವರು ಇರುವರು ಸತ್ತವನು ಈ ದೃಶ್ಯವನ್ನು ನೋಡಲಾರನಷ್ಟೇ. ಆದರೆ ಮತ್ತೊಂದು ಮೃತ್ಯು ಸದ್ರುಶವಾದುದು 'ರೋಗ'ಎಂಬುದಿದೆ, ಮನುಷ್ಯನು,  ರೋಗವನ್ನು ಮ್ರುತ್ಯುಯೋಪಾದಿಯಲ್ಲಿ ನೋಡುತ್ತಿರುತ್ತಾನೆ, ರೋಗವು 'ಮ್ರುತ್ಯುಸ್ವರೂಪಿ' ಎಂಬುದುದು ಅವನಿಗೆ ಗೊತ್ತಿದೆ. ಆದ್ದರಿಂದಲೇ ಅವನಿಗೆ ವಿಪರೀತ ಭಯ. ಎಲ್ಲಿ ಯಾವಾಗ ಸಾಯುವೆನೋ ಎಂಬುದೇ ಅವನನ್ನು ಇದ್ದೂ ಸತ್ತಂತೆ ಮಾಡುವ ಮಹಾರೋಗ. ವಿವೇಕಾನಂದರು ಹೇಳುತ್ತಾರೆ -ಧೈರ್ಯ ಎಂಬುದೇ ಬದುಕು ಭಯವೆಂಬುದೆ ಮೃತ್ಯು. 
ಪಾಪಕರ್ಮಗಳಿಂದ ದೂರವಿರಬೇಕು, ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಬೇಕು. ಪುಣ್ಯ  ಕಾರ್ಯಗಳಿಂದ  ಸ್ವರ್ಗದಲ್ಲಿ  ಸ್ಥಾನವಿದೆ. ಪಾಪಕಾರ್ಯದಿಂದ ಇಹದಲ್ಲು ಕಷ್ಟ, ಪರದಲ್ಲಿಯೂ ಕಷ್ಟ. 'ಪರೋಪಕಾರಾಯ ಪುಣ್ಯಾಯ, ಪಾಪಾಯ ಪರ ಪೀಡನಾಯ' ಎಂಬುದು ಪ್ರಸಿದ್ಧ ವಾಕ್ಯ                                                

-- 
ಕುಮಾರಸ್ವಾಮಿ ಕೆ. ಆರ್ 
ವೈಜ್ಞಾನಿಕ ಜ್ಯೋತಿಷಿ 
ಶ್ರೀ ಸ್ವಾತಿ ಗಣಪತಿ ಜ್ಯೋತಿಷ್ಯ ಸಂಶೋಧನಾ ಕೇಂದ್ರ 
ಪದ್ಮನಾಭನಗರ, ಬೆಂಗಳೂರು ಕಿಡ್ನಿ ಫೌಂಡೆಶನ್ ಹಿಂಬಾಗ 
ಬೆಂಗಳೂರು 

No comments:

Post a Comment