Saturday 18 August 2012

karma phala mattu adrushta

ಕರ್ಮ ಎಂದಾಗ  ಪ್ರಾರಬ್ಧಕರ್ಮ, ಸಂಚಿತಕರ್ಮ, ಆಗಮಿಕರ್ಮ ಇವು ಗಮನಕ್ಕೆ ಬರುವುದು.   ಹಿಂದೆ ಮಾಡಿದ್ದರ ಫಲ(ಪ್ರಾರಬ್ಧ)  , ಈಗ ಮಾಡುತ್ತಿರುವುದರ ಫಲ ಸಂಚಯವಾಗಿ(ಸಂಚಿತ) ಉಂಟಾಗುವ ಫಲ,  ಮುಂದೆ ಅನುಭವಿಸಬೇಕಾಗಿಬರಬಹುದಾದುದಕ್ಕೆ
 (ಆಗಮಿ) ಕಾರಣವಾಗುವ ಫಲ ಇವುಹುಟ್ಟಿದ ಎಲ್ಲಾ ಜೀವಿಗಳಿಗೂ ಅನ್ವಯ.
        ತಾಪತ್ರಯಗಳನ್ನು  (ಆದಿದೈವಿಕ,ಆದಿಭೌತಿಕ,ಆದ್ಯಾತ್ಮಿಕ)   ನಾವು ಹೇಗೆ ಗಮನಿಸುತ್ತೀವೋ ತಾಪವೆಂದರೆ ಶಾಖ (ಇದಕ್ಕೆ ಸ್ವಾಭಾವಿಕವಾಗಿಯೇ  ಸುಡುವ ಗುಣವಿರುತ್ತದೆ ) ಈ ರೀತಿಯ ಕರ್ಮ,  ಅಥವಾ ತಾಪಗಳನ್ನು ಉಪಶಮನ ಮಾಡುವುದಕ್ಕಾಗಿಯೇ   ಸತ್ಕರ್ಮ ಸಚ್ಹಿಂತನೆ ಸದ್ವಚನ  ಮುಂತಾದುವು ನಮ್ಮ ಮುಂದಿರುತ್ತದೆ. ಇದನ್ನು ಗಮನಮಾಡುವುದಿಲ್ಲವಾದ್ದರಿಂದ  ಸಮಸ್ಯೆಯ ಸುಳಿಯಲ್ಲಿ ಸದಾ ಸಿಕ್ಕಿಕೊಂಡಿರುತ್ತೇವೆ.
    ಭಗವತ್ ಪ್ರಚೋದನೆ ಮೂಲಕ ದೊರಕಿದ ಮಾರ್ಗದರ್ಷನವು ಗುರುವಿನದಾದರೆ  ಅನುಗ್ರಹವು ಮಾತ್ರ ಭಗವಂತನದೇ ಆಗಿರುತ್ತೆ. 
     ಅನುಗ್ರಹವು ಪೂರ್ವಪುಣ್ಯವನ್ನೂ , ಪುರ್ವಪುಣ್ಯವು ಕರ್ಮವನ್ನೂ  ಎಡಬಿಡದೆ ಸಂಕೋಚವಿಲ್ಲದೆ ಅನುಸರಿಸುತ್ತವೆ.
ಕರ್ಮವು ಸವಿಯುವವರೆಗೂ ಶುಭಾಫಲವು ಗೋಚರಿಸುವುದಿಲ್ಲ. ಸತ್ಕರ್ಮಗಳಿಂದ ಕರ್ಮದ ತೀಕ್ಷ್ಣತೆಯನ್ನು ಕಡಿಮೆಮಾಡಿಕೊಳ್ಳಲು ಸಾಧ್ಯವಾಗಬಹುದು ಇಲ್ಲಿ ಪ್ರಾಮಾಣಿಕ ಸತ್ಪ್ರಯತ್ನವಿರಬೇಕು ಅಷ್ಟೆ.
 ಕೆಲವೊಮ್ಮೆ  ಶುಭಫಲ  ಲಭ್ಯವಾದಾಗಲು ಅಥವಾ  ಅಲಭ್ಯವಾದಾಗಲೂ  ಮಾರ್ಗದರ್ಶಕನನ್ನು ಮರೆಯುವವಂತಹ ಮನಸ್ಕರಾಗುತ್ತಾರೆ  ಇದು ಜನ್ಮಾಂತರ ಕರ್ಮ ಫಲ.  ಹೀಗಾಗಿ ಪೂರ್ವಪುಣ್ಯದ,  ಅದೃಷ್ಟದ, ಶ್ರಮದ   ಶುಭಫಲಗಳನ್ನು ಅನುಭವಿಸುವ ಸೌಭಾಗ್ಯವು  ಕೈತಪ್ಪಿಹೊಗುವ ಸಾಧ್ಯತೆ ಇರುತ್ತದೆ.   ಯಾವಾಗಲೂ ಶುಭಫಲವು ಪುರ್ವಪುಣ್ಯವನ್ನೂ,
ಪುರುಷ ಪ್ರಯತ್ನವನ್ನೂ ಹಿಂಬಾಲಿಸುತ್ತದೆ.
ನಿರಂತರ ಸಾಧನೆ,  ಪ್ರಾಮಾಣಿಕಪ್ರಯತ್ನ , ಒಳ್ಳಯದನ್ನೇ ಮಾಡುವ ಹಂಬಲ  ಹಾಗು ಛಲ  ಇರಬೇಕು.  ಆಗ ಪರಿಶ್ರಮದ ಶುಭಫಲವು ನಿಶ್ಚಯವಾಗಿಯೂ ನಿರ್ದಿಷ್ಟಸಮಯದಲ್ಲಿ ಅನುಭವಕ್ಕೆ ಬರುವುದು. ಇದನ್ನು (ಕರ್ಮದ ಫಲವನ್ನು)ಅದೃಷ್ಟವೆಂತಲೂ, ಪುರ್ವಪುಣ್ಯವೆಂತಲೂ  ಭಾವಿಸುತ್ತೇವೆ.  



No comments:

Post a Comment