Friday 24 August 2012

ಶ್ರೀ ಕೃಷ್ಣ ನು  ಅರ್ಜುನನನ್ನು ಒಂದು ಸಾಧನವನ್ನಾಗಿಟ್ಟುಕೊಂಡು ಮನುಷ್ಯನಲ್ಲಿರುವ ಪಂಚೆಂದ್ರಿಯಾದಿ  ಅರಿಷಡ್ವರ್ಗಗಳನ್ನು ಹತೋಟಿ ಅಥವಾ ನಾಶ ಮಾಡುವುದಕ್ಕೆ ಬೇಕಾದ ಮಾರ್ಗವನ್ನು ಸೂಚಿಸುತ್ತಿದ್ದಾನೆ. ಆತ್ಮವನ್ನು ಬೆಂಕಿಯಲ್ಲಾಗಲಿ,ಶಸ್ತ್ರದಲ್ಲಾಗಲಿ,  ನೀರಿನಲ್ಲಾಗಲಿ ಯಾವುದರಿಂದಲೂ ಕೊಲ್ಲಲಾಗುವುದಿಲ್ಲ. ಆತ್ಮವು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಕರ್ಮಕ್ಕೆ ತಕ್ಕಂತೆ ವರ್ಗಾಯಿಸಲ್ಪಡುವುದು, ಯಾವುದೇ ಕಾರಣಕ್ಕೂ ನಾಶವಾಗುವುದಿಲ್ಲ.
ಯುದ್ಧವು ಧರ್ಮ ಹಾಗು ಅಧರ್ಮಗಳ ನಡುವೆ, ಯುದ್ಧವು ವ್ಯಕ್ತಿಗತವವಾಗಿಲ್ಲ ಎಂಬುದು ಶ್ರೀಕೃಷ್ಣನ ನಿಲುವು.      
ಹುಟ್ಟಿದಮೇಲೆ ಸಾಯಲೇಬೇಕು, ಸತ್ತವನು ಹುಟ್ಟಲೇಬೇಕು ಆದರೆ ಬದುಕಿರುವಾಗ ಸತ್ಯ, ಧರ್ಮವಂತನಾಗಿರಬೇಕು. ಧರ್ಮಕ್ಕೆ ವಿರುದ್ಧವಾಗಿರಬಾರದು. ಯಾವಾಗಲು ಧರ್ಮಕ್ಕೆ ಜಯ ಎಂಬುದು ವೇದ. ದುರಾಚಾರಗಳು ಕೊನೆಯಾಗಬೇಕು. ಧರ್ಮ ಸ್ಥಾಪನೆಯಾಗಬೇಕು. ಆದ್ದರಿಂದಲೇ ನಾನು ಸಹ ಮತ್ಸ್ಯ ಇತ್ಯಾದಿ ಅವತಾರ ಮಾಡಬೇಕಾಯ್ತು.
ರಾಜ್ಯ ಸಂಪಾದನೆಗಾಗಲಿ ಅಧಿಕಾರವನ್ನು ಗಳಿಸುವುದುಕ್ಕಾಗಲಿ ಯುದ್ಧವಾಗುತ್ತಿಲ್ಲ. ಅಧರ್ಮವು ಸಂಪೂರ್ಣನಾಶವಾಗಿ
ಧರ್ಮವು ವಿಜ್ರುಮ್ಬಿಸಲೇಬೇಕು ಇದೇ ಶ್ರೀಕೃಷ್ಣನ ಮುಖ್ಯೋದ್ಧೇಶವಾಗಿತ್ತು. ಇದನ್ನು ತಿಳಿಸಲು ಗೀತೋಪದೇಶ ಮಾಡಬೇಕಾಯ್ತು  ಇತಿಹಾಸವೇ  ನಿರ್ಮಾಣವಾಯ್ತು.   ಗೀತಾಧ್ಯಯನದಿಂದ ಮನುಷ್ಯನಜನ್ಮವೇ ಸಾರ್ಥಕಗೊಳ್ಳುವುದು ಎಂದಮೇಲೆ ಗೀತೆಯಮಹತ್ವವನ್ನು  ಸಾಮಾನ್ಯನು  ವರ್ಣಿಸಲಾರನಷ್ಟೆ.

1 comment:

  1. ಒಂದು ಸಣ್ಣ ಬುಗುರಿಯನ್ನ ಆಡಿಸಲು ಚಾಟಿ ಬೇಕು..ಒಂದು ಕುದುರೆಯನ್ನ ಓಡಿಸಲು ಚಾಟಿ ಬೇಕು...ಒಂದು ದೊಡ್ಡ ಸಿಂಹವನ್ನು ಆಡಿಸಲು ಚಾಟಿ ಬೇಕು..
    ಶ್ರೀ ಕೃಷ್ಣ..ಲೋಕದ ಹಿತಕ್ಕಾಗಿ ಅರ್ಜುನನನ್ನು ಚಾಟಿಯ ಹಾಗೆ ಉಪಯೋಗಿಸಿ ಕೊಟ್ಟ ಉಪದೇಶ ಗೀತ...ಸೂಪರ್ ಚಿಕ್ಕಪ್ಪ..ಸೊಗಸಾಗಿದೆ..

    ReplyDelete