Friday 17 August 2012

Specific goal of SRIMADBHAGAVADGEETHA

ಶ್ರೀಮತ್  ಭಗವದ್ಗೀತೆಯು ಭಗವಂತನು  ಆದೇಶಿಸಿರುವ ಮನುಷ್ಯನು ತಿಳಿದುಕೊಳ್ಳಲೇಬೇಕಾದ ತಿಳುವಳಿಕೆಯ ಮಹಾಸಾಗರ.
ಶ್ರೀಮತ್  ಭಗವದ್ಗೀತೆಯ ಅತ್ಯಂತ ಆತ್ಮೀಯವಾದ,ಆಪ್ಯಾಯಮಾನವಾದ,ಮನುಷ್ಯನು  ಎಂಥಹ ಸ್ಥಿತಿ ಯಲ್ಲೂ ಅಳವಡಿಸಿಕೊಳ್ಳಲೇ ಬೇಕಾದ ಮುಖ್ಯ ಉದ್ಧೇಶವನ್ನು ಹೊಂದಿದೆ.   ಗೀತೆಯು ಮನುಷ್ಯನ ಕಲ್ಯಾಣಕ್ಕಾಗಿಯೇ ಇದೆ. ಅಂದರೆ ಜೀವನದ ಪರಮೋದ್ಧೇಶವು ಈ ಗೀತೆಯಲ್ಲಿ ಅಡಗಿದೆ. ದೈವ ಸಾಕ್ಷಾತ್ಕಾರ ಪಡೆಯಬೇಕಾದರೆ ಗೀಥಾನುಷ್ಠಾನದ ಆವಶ್ಯಕತೆ ಇದೆ.  ಮನುಷ್ಯನು ಬದುಕಲು ಸಾಧ್ಯವೇ ಇಲ್ಲವೆಂಬುದಕ್ಕೆ ಉದಾಹರಣೆ ಇರುವುದಿಲ್ಲ. ಕಾರಣವೇನೆಂದರೆ ಭಗವಂತನು ಎಲ್ಲೆಡೆ,ಯಾವುದೇ ಸಮಯದಲ್ಲಿಯೂ,ಎಂಥಹುದೆಸ್ಥಿಥಿಯಲ್ಲಿಯೂ ಸಮಾನವಾಗಿ ಪ್ರತ್ಯಕ್ಷವಾಗಿಯೂ ಇರುತ್ತಾನೆ. ಭಗವಂತನ ಕೃಪೆಗೆ ಪಾತ್ರನಾಗಲು ವಸ್ತು ಸ್ಥಿತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಉತ್ತಮ ಸ್ಥಿತಿಯ ಉಪಯೋಗವೆಂದರೆ ಆಸೆಯನ್ನು     ಬಿಡಬೇಕು, ತ್ಯಾಗಮಯಿಯಾಗಬೇಕು, ಯಾವುದೇ ಸ್ಥಿತಿಯಲ್ಲೂ ಸತ್ಯವನ್ನು ಬಿಡಬಾರದು, ಲೌಕಿಕಸುಖದಿಂದ ಹೊರತಾಗಿರಬೇಕು, ಸಂಕಲ್ಪ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು,  ಮತ್ತೊಬ್ಬರ ಸೇವೆಗಾಗಿ ಶ್ರಮಿಸಬೇಕು, ಮನೋನಿಯನ್ತ್ರಣ ವಿರಬೇಕು,ಇಂಥಹ ಸ್ಥಿತಿಯ ಉಪಯೋಗದಿಂದ ದೈವಸಾನಿಧ್ಯವು  ಹತ್ತಿರವಾಗಬಹುದು.
ಸದಾಚಾರಿಯ  ಸದಾಚಾರದಿಂದ ಪಾಪವು  ಕ್ಷಣಕ್ಷಣಕ್ಕೂ ಕ್ಷೀಣಿಸುತ್ತದೆ.
ದುರಾಚಾರಿಯ ದುರಾಚಾರದಿಂದ  ಪುಣ್ಯವು   ಕ್ಷಣಕ್ಷಣಕ್ಕೂ ಕ್ಷೀಣಿಸುತ್ತದೆ.
ಅನಾಚಾರದಿಂದ ಪತಿತತ್ವ, ಸದಾಚಾರದಿಂದ ದೈವತ್ವ  ಪ್ರಾಪ್ತಿಯಾಗುತ್ತದೆ.
ಮತ್ತೊಬ್ಬರ ಅನ್ನವನ್ನು(ದುಡಿಮೆಯನ್ನು ) ಕದಿಯುವುದು, ಪ್ರತಿ ಕ್ಷಣ ಸುಳ್ಳುಹೇಳುವುದು, ದುಡಿಯದೆ ಇರುವುದು, ಅನ್ನಕ್ಕಾಗಿ ಸಾಲಮಾಡುವುದು, ಪ್ರತಿಕ್ಷಣ ಮುಗ್ಧತೆಯ ಶೋಷಣೆ ಮಾಡುವುದು  ಇವುಗಳನ್ನು ಮಾಡುವವರು  ಯಾರೇ ಆಗಲಿ ಪಡಬಾರದ ಕಷ್ಟವನ್ನು ,   ಹೊಂದಲಾರದನಷ್ಟವನ್ನು ಅನುಭವಿಸುತ್ತಾರೆ. ಕೆಟ್ಟದಕ್ಕೆ ನೂರೆಂಟು ಬಾಗಿಲು, ಒಳ್ಳಯದಕ್ಕೆ ಒಂದೇ ಬಾಗಿಲು.
ಗೀತೆಯ ಶ್ರವನಕ್ಕಿಂತ ಮನನ; ಮನನಕ್ಕಿಂತ ಧ್ಯಾನ ;ಧ್ಯಾನಕ್ಕಿಂತ ನಿರ್ವಿಕಲ್ಪ ಒಂದಕ್ಕಿಂತ ಒಂದು ಉತ್ಕೃಷ್ಟ ಚೇತನವುಳ್ಳದ್ದು.

1 comment:

  1. ...ಭಗವದ್ಗೀತೆಗೆ ಸರಿಸಾಟಿಯಾದ ಕಾವ್ಯ ಇನ್ನೊಂದಿಲ್ಲ..ಮನುಜನ ಮುಖಪುಟ ಈ ಗೀತೆ...ಹ್ಯಾಗ್ಹ್ಯಾಗೋ ಇರಬೇಕು ಅನ್ನುವ ಬದಲು..ಹೀಗೆ ಇರಬೇಕು ಎಂದು ಗೆರೆ ಸೂಚಿಸಿ ಹೇಳುವ ಒಂದು ಮಹಾನ್ ಗೀತೆ...ಇದರಲ್ಲಿ ಇಲ್ಲದೆ ಇರುವುದು ಪ್ರಪಂಚದಲ್ಲಿ ಇಲ್ಲ..ಅನ್ನುವಷ್ಟರ ಮಟ್ಟಿಗೆ ಸಾರ ಇದೆ...ವ್ಯಾಖ್ಯಾನ ಚೆನ್ನಾಗಿದೆ ಚಿಕ್ಕಪ್ಪ...ನಿಮ್ಮ ಬರವಣಿಗೆಯ ಬಿಡುಗಡೆಗೆ ಕಾಯುತ್ತ ಕುಳಿತಿರುವ ಓದುಗ...

    ReplyDelete